ಕೆಪಿಸಿಸಿ ಅಧ್ಯಕ್ಷರ ನೈತಿಕ ಸ್ಥೈರ್ಯ ಕುಗ್ಗಿಸುವುದಕ್ಕಾಗಿ ಐಟಿ, ಇಡಿ ಮೂಲಕ ದಾಳಿ: ಅಮಳ ರಾಮಚಂದ್ರ

0

ಪುತ್ತೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಕ್ಕಾಗಿ ಬಿಜೆಪಿ ಸರಕಾರವು ಅವರ ಮೇಲೆ ಇಡಿ, ಐಟಿಗಳಂತಹ ದಾಳಿಗಳನ್ನು ನಡೆಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.


ಡಿ.21 ರಂದು ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳು ಮಾಡುವಂತಹ ಕೆಲಸವನ್ನು ಮಾಡ್ತಾ ಇದ್ದಾರೆ. ಡಿ.ಕೆ. ಶಿವಕುಮಾರ್‌ರವರ ಮೇಲೆ ಡಿ.19 ರಂದು ಸಿಬಿಐ ಯವರು ಅವರಿಗೆ ಸಂಬಂಧಿಸಿದ ಕೆಲವೊಂದು ಶಿಕ್ಷಣ ಸಂಸ್ಥೆಗಳ ಮೇಲೆ ರೈಡ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಒಂದು ಮಹತ್ವದ ಅಧಿವೇಶನ ನಡೆಯಲಿದ್ದು, ಇದರಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ಆದ ಓಟರ್‌ಗೇಟ್ ಪ್ರಕರಣದ ಕುರಿತು ಚರ್ಚೆ ನಡೆಯಬೇಕು. ಶೇ.40 ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಈ ಸಮಯದಲ್ಲಿ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ರವರ ನೈತಿಕ ಸ್ಥೈರ್ಯವನ್ನು ಕುಂದಿಸಬೇಕು ಎನ್ನುವಂತಹ ಉದ್ದೆಶದಿಂದಲೇ ಸಿಬಿಐ ದಾಳಿ ಮಾಡಿದೆ ಎಂದರು.

ರಾಜಕೀಯ ಪಕ್ಷವನ್ನು ಅನೈತಿಕವಾಗಿ ಮುಗಿಸುವಂತಹ ಹುನ್ನಾರ ನಡೆಯುತ್ತಿದೆ. ಆದರೆ ಇದ್ಯಾವುದಕ್ಕೂ ಹೆದರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಚಿಲುಮೆ ಎಂಬ ಸಂಸ್ಥೆಯನ್ನು ಉಪಯೋಗಿಸಿಕೊಂಡು 5 ಲಕ್ಷಕ್ಕೂ ಹೆಚ್ಚು ಜನಗಳ ಓಟನ್ನು ಡಿಲೀಟ್ ಮಾಡಿಕೊಂಡು, ಓರ?ಸ್ಗಳ ಡೀಟೈಲ್‌ಗಳನ್ನು ಕದ್ದು, ನಕಲಿ ಐಡಿಕಾಡ್‌ಗಳನ್ನು ಉಪಯೋಗಿಸಿ ನಡೆಸಿದ ಅವ್ಯವಹಾರಗಳನ್ನು ಮಾಡಿದ್ದು, ಈ ಇಷ್ಯುಗಳೇ ವಿಧಾನಸಭೆಯಲ್ಲಿ ಬರಬಾರದು ಎಂಬ ಕಾರಣಕ್ಕಾಗಿ ಒಟ್ಟು ವಿಧಾನ ಸಭೆಯ ಅಧಿವೇಶನದಲ್ಲಿ ಗದ್ದಲ ಮಾಡಬೇಕು ಎನ್ನುವ ಉzಶದಿಂದಲೇ ಈ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಮಳ ಆರೋಪಿಸಿದರು.

2017 ರಲ್ಲಿ ಗುಜರಾತ್ ರಾಜ್ಯದ ಕಾಂಗ್ರೆಸ್ ಎಂಎಲ್‌ಎಗಳು, ಬಿಜೆಪಿಯ ಆಪರೇಶನ್ ಕಮಲಕ್ಕೆ ಒಳಗಾಗದಂತೆ, ಭ್ರಷ್ಟಾಚಾರವನ್ನು ತಡೆಯಲು ಡಿಕೆಶಿ ಅವರು ರಾಜ್ಯದಲ್ಲಿ ಅವರಿಗೆ ವ್ಯವಸ್ಥೆ ಮಾಡಿದ್ದರು. ಇದನ್ನು ಸಹಿಸದೆ ಅಂದು ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಬಳಿಕ ಅದನ್ನು ಕಾಕತಾಳೀಯ ಎಂದು ಬಿಂಬಿಸಲಾಯಿತು. ಅದು ಕಳೆದು 5 ವರ್ಷಗಳಾದರೂ ಇಂದಿಗೂ ದಾಳಿ ಮುಗಿದಿಲ್ಲ. 2019ರಲ್ಲಿ ಡಿಕೆಶಿ ಅವರನ್ನು ಬಂಧಿಸಲಾಯಿತು. 2020 ರಲ್ಲಿ ಆರ್.ಆರ್. ನಗರ ಮತ್ತು ಶಿರಾ ಉಪಚುನಾವಣೆಗಳು ಬಂದಾಗ ಅವರ ಮೇಲೆ ಪುನಹ ರೈಡ್ ಆಗುತ್ತದೆ. ಉಪಚುನಾವಣೆಗಳಲ್ಲಿ ಪಕ್ಷದ ಆತ್ಮ ಸ್ಥೈರ್ಯವನ್ನು ಕುಂದಿಸಬೇಕು ಎನ್ನುವ ಉದ್ದೇಶ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಆಗಮಿಸುವ ಕೆಲವು ದಿನಗಳ ಮೊದಲು ಪುನಹ ರೈಡ್ ಆಗಿತ್ತು. ಒಂದು ಮಹತ್ವ ಪೂರ್ಣ ಕೆಲಸವಾಗುತ್ತಿರುವಾಗ ಸಿಬಿಐ, ಐಟಿ, ಇಡಿ ರೈಡ್ ಮಾಡುತ್ತಿರುವುದು ಪ್ರತಿ ಸಲವು ಹೇಗೆ ಕೋ-ಇನ್ಸಿಡೆಂಟ್ ಆಗುತ್ತದೆ ಎಂದು ಪ್ರಶ್ನಿಸಿದ ಅಮಳ, ರಾಹುಲ್ ಗಾಂಧೀಯವರ ಭಾರತ್ ಜೋಡೋ ಯಾತ್ರೆ ಅದಕ್ಕಿಂತ ಮಹತ್ವವಾದದ್ದು, ದೇಶಕ್ಕೆ ಒಂದು ಹೊಸ ದಿಕ್ಕನ್ನು ಕೊಡುವಂತದ್ದು, ಕರ್ನಾಟಕದಲ್ಲಿ ಅಭೂತಪೂರ್ವ ಜನಬೆಂಬಲ ಇದೆ. ಇದನ್ನು ಹಾಳುಮಾಡಲು ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಕಳೆದ ಅನೇಕ ವರ್ಷಗಳಿಂದ ಇಡೀ ದೇಶದಲ್ಲಿ ಅನೇಕ ಕಡೆಗಳಲ್ಲಿ ಅಪರೇಷನ್ ಕಮಲ ಆಗಿದೆ. ಬಿಜೆಪಿಯವರು ಅನೇಕ ರಾಜ್ಯಗಳಲ್ಲಿ ಇಂದಿನ ವರೆಗೆ ಸುಮಾರು 277 ಎಂಎಲ್‌ಎಗಳನ್ನು ವಿವಿಧ ಪ್ರದೇಶಗಳಲ್ಲಿ ಖರೀದಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯವರು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿದ್ದಾರೆ ಎಂದು ಆರೋಪಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಿಯಾರh, ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here