ಅಕ್ಷಯ ಕಾಲೇಜಿನಲ್ಲಿ ಮೇಳೈಸಿದ ಜಿಲ್ಲಾ ಮಟ್ಟದ ಅಂತರ್-ಕಾಲೇಜು ಫೆಸ್ಟ್ `ಅಟೆರ್ನಸ್’

0

ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ಚಾಂಪಿಯನ್, ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು ರನ್ನರ್‍ಸ್, ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜು(ತೃ)

ಚಿತ್ರ: ನವೀನ್ ರೈ ಪಂಜಳ

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್‌ನಡಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಪದವಿ ಪೂರ್ವ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಅಂತರ್-ಕಾಲೇಜು ಸಾಂಸ್ಕೃತಿಕ ಫೆಸ್ಟ್ `ಅಟೆರ್ನಸ್’ ದ.23 ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿದ್ದು, ಸಂಭ್ರಮದ ತೆರೆ ಕಂಡಿದೆ.

ಹತ್ತು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದ್ದು ಅಂತಿಮವಾಗಿ 120 ಅಂಕಗಳನ್ನು ಗಳಿಸಿದ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ಚೊಚ್ಚಲ ಆವೃತ್ತಿಯ ಚಾಂಪಿಯನ್ ಎನಿಸಿಕೊಂಡಿದ್ದು, ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು ರನ್ನರ್‍ಸ್, ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜು ತೃತೀಯ ಸ್ಥಾನವನ್ನು ಗಳಿಸಿಕೊಂಡಿದೆ. ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ಫಲಕದೊಂದಿಗೆ ರೂ.12 ಸಾವಿರ ನಗದು, ರನ್ನರ್ಸ್ ತಂಡಕ್ಕೆ ಪ್ರಶಸ್ತಿ ಫಲಕದೊಂದಿಗೆ ರೂ.10 ಸಾವಿರ ನಗದು ಹಾಗೂ ತೃತೀಯ ಸ್ಥಾನಿಗೆ ಪ್ರಶಸ್ತಿ ಫಲಕದೊಂದಿಗೆ ರೂ.8 ಸಾವಿರ ನಗದನ್ನು ನೀಡಲಾಯಿತು. ಅಲ್ಲದೆ ಪ್ರತಿ ಇವೆಂಟ್‌ಗಳ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿಜೇತರಿಗೂ ನಗದನ್ನು ನೀಡಲಾಗಿತ್ತು.

ವಿಭಾಗವಾರು ಫಲಿತಾಂಶ:
ಕಾಲೇಜು ಹಮ್ಮಿಕೊಂಡ ಹತ್ತು ಸ್ಪರ್ಧೆಗಳಲ್ಲಿನ ಪೇಂಯ್ಟಿಂಗ್‌ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ಪ್ರಥಮ್ ದೇವಾಂಗ್ ಕೆ(ಪ್ರ), ಕಾಂಞಗಾಡ್ ದುರ್ಗಾ ಎಚ್.ಎಸ್.ಎಸ್ ಕಾಲೇಜಿನ ಸ್ಪಂದನಾ ಪಿ.ವಿ(ದ್ರಿ), ಅಂಬಿಕಾ ಪಿಯು ಕಾಲೇಜಿನ ದಿಶಾ ಕೆ(ತೃ), ಮಾತುಗಾರಿಕೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ರಿಶ್ಮಾ ಕಾವೇರಮ್ಮ(ಪ್ರ), ಸುಬ್ರಹ್ಮಣ್ಯ ಎಸ್.ಎಸ್.ಪಿಯು ಕಾಲೇಜಿನ ಆತ್ಮಶ್ರೀ ಎಚ್.ಜಿ(ದ್ವಿ), ರಾಮಕುಂಜ ಆತೂರು ಆಯಿಷಾ ಕಾಲೇಜಿನ ಫಾತಿಮತ್ ರಾಫಿಯಾ(ತೃ), ಸ್ಟ್ಯಾಂಡ್ ಅಪ್ ಕಾಮಿಡಿಯಲ್ಲಿ ಸುಬ್ರಹ್ಮಣ್ಯ ಎಸ್.ಎಸ್.ಪಿಯು ಕಾಲೇಜಿನ ಪವನ್ ಕುಮಾರ್(ಪ್ರ), ಅಂಬಿಕಾ ಪಿಯು ಕಾಲೇಜಿನ ವರುಣ್ ಕುಮಾರ್(ದ್ವಿ), ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜಿನ ಗಗನ್ ಕುಮಾರ್(ತೃ), ಪ್ರಾಡಕ್ಟ್ ಲಾಂಚ್‌ನಲ್ಲಿ ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜಿನ ಮಹಾರೂಪ್(ಪ್ರ), ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ಶ್ರೇಯಸ್ ಕೆ, ಸುಬ್ರಹ್ಮಣ್ಯ ಎಸ್.ಎಸ್.ಪಿಯು ಕಾಲೇಜಿನ ಮೋಕ್ಷಿತ್(ತೃ), ಮೋಕ್ ಪ್ರೆಸ್‌ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ಅದ್ವಿಕಾ ಕೆ.ಆರ್(ಪ್ರ), ಕಾಂಞಗಾಡ್ ದುರ್ಗಾ ಎಚ್.ಎಸ್.ಎಸ್ ಕಾಲೇಜಿನ ನಂದನಾ ಎನ್.ಎಸ್(ದ್ವಿ), ಸುಬ್ರಹ್ಮಣ್ಯ ಎಸ್.ಎಸ್.ಪಿಯು ಕಾಲೇಜಿನ ಮನಾಸ್(ತೃ), ಏಕವ್ಯಕ್ತಿ ಗಾಯನದಲ್ಲಿ ಅಂಬಿಕಾ ಪಿಯು ಕಾಲೇಜಿನ ಅವ್ಯ ಕೆ.ಎನ್(ಪ್ರ), ಸುಳ್ಯ ಎನ್.ಎಂ.ಸಿ ಕಾಲೇಜಿನ ನಿಶ್ಮಿತಾ ಕೆ(ದ್ವಿ), ಬೆಟ್ಟಂಪಾಡಿ ಸರಕಾರಿ ಪಿಯು ಕಾಲೇಜಿನ ಗ್ರೀಶ್ಮಾ ಜಿ(ತೃ), ರಸಪ್ರಸ್ನೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪಿಯು ಕಾಲೇಜ್(ಪ್ರ), ಅಂಬಿಕಾ ಪಿಯು ಕಾಲೇಜ್(ದ್ವಿ)., ಸವಣೂರು ಸರಕಾರಿ ಪಿಯು ಕಾಲೇಜು(ತೃ), ಕಸದಿಂದ ರಸದಲ್ಲಿ ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು(ಪ್ರ), ಬೆಟ್ಟಂಪಾಡಿ ಸರಕಾರಿ ಪಿ.ಯು ಕಾಲೇಜು(ದ್ವಿ), ಎನ್.ಎಂ.ಸಿ ಸುಳ್ಯ(ತೃ), ಪೇಪರ್ ಔಟ್ ಫಿಟ್‌ನಲ್ಲಿ ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು(ಪ್ರ), ರಾಮಕುಂಜ ಆಯಿಷಾ ಕಾಲೇಜು(ದ್ವಿ), ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು(ತೃ), ಸಮೂಹ ನೃತ್ಯದಲ್ಲಿ ಎನ್.ಎಂ.ಸಿ ಸುಳ್ಯ(ಪ್ರ), ರಾಮಕುಂಜ ಆತೂರು ಆಯಿಷಾ ಕಾಲೇಜು(ದ್ವಿ), ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು(ತೃ)ರವರು ವಿಜೇತರಾಗಿದ್ದಾರೆ.

ಭಾಗವಹಿಸಿದ ಕಾಲೇಜುಗಳಿಗೆ ಸ್ಮರಣಿಕೆ:
ಈ ಸಾಂಸ್ಕೃತಿಕ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಪದವಿ ಪೂರ್ವ ಕಾಲೇಜುಗಳಾದ ಸಿದ್ಧಕಟ್ಟೆ ಗುಣಶ್ರೀ ಕಾಲೇಜು, ಬೆಳ್ತಂಗಡಿಯ ಸೈಂಟ್ ತೆರೆಸಾ ಕಾಲೇಜು, ಸವಣೂರು ಸರಕಾರಿ ಕಾಲೇಜು, ರಾಮಕುಂಜ ಆತೂರು ಆಯಿಷ ಕಾಲೇಜು, ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು, ಈಶ್ವರಮಂಗಲ ಪಂಚಲಿಂಗೇಶ್ವರ ಕಾಲೇಜು, ಸುಬ್ರಹ್ಮಣ್ಯ ಎಸ್.ಎಸ್ ಕಾಲೇಜು, ಕಾಂಞಗಾಡ್ ದುರ್ಗಾ ಎಚ್.ಎಸ್.ಎಸ್ ಕಾಲೇಜು, ಪುತ್ತೂರು ಅಂಬಿಕಾ ಕಾಲೇಜು, ಕುಂಬ್ರ ಕಾಲೇಜು, ಎನ್‌ಎಂಸಿ ಸುಳ್ಯ, ಗಜಾನನ ಸಂಯೋಜಿತ ಕಾಲೇಜು, ಗುರುವಾಯನಕೆರೆ ಎಕ್ಸೆಲ್ ಕಾಲೇಜು, ಬೆಟ್ಟಂಪಾಡಿ ಸರಕಾರಿ ಕಾಲೇಜು, ಬೆಟ್ಟಂಪಾಡಿ ಸರಕಾರಿ ಕಾಲೇಜು ತಂಡಕ್ಕೆ ಪ್ರಮಾಣಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸ್ಪರ್ಧಾಕೂಟದಲ್ಲಿ ಸುಮಾರು 250ಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದ್ದರು.

ಅಕ್ಷಯ ಕಾಲೇಜಿನಿಂದ ಬದುಕು ಕಟ್ಟಿಕೊಡುವ ಕೈಂಕರ್ಯ-ಡಾ|ಕಿಶೋರ್ ಕುಮಾರ್:
ಮುಖ್ಯ ಅತಿಥಿ, ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ|ಕಿಶೋರ್ ಕುಮಾರ್ ಸಿ.ಎಚ್‌ರವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವ್ಯವಸ್ಥೆ ಮಾಡುತ್ತಾ ಅವರಿಗೆ ಬದುಕು ಕಟ್ಟಿಕೊಡುವ ಕೈಂಕರ್ಯ ಈ ಅಕ್ಷಯ ಕಾಲೇಜಿನಿಂದ ಆಗುತ್ತಿದೆ. ವಿದ್ಯಾರ್ಥಿಗಳು ಪಾಠದೊಂದಿಗೆ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಾಗ ಮತ್ತಷ್ಟು ಜ್ಞಾನ ವೃದ್ಧಿಸುತ್ತದೆ. ಸಾಂಸ್ಕೃತಿಕ ದೇಶವಾಗಿರುವ ನಮ್ಮ ಭಾರತ ದೇಶದ ನಾಡು-ನುಡಿಯನ್ನು ಉಳಿಸುವ ಕಾರ್ಯದಲ್ಲಿ ನಾವು ಮುಂದೆ ಸಾಗೋಣ ಎಂದರು.

ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಿ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಪಿಯುಸಿ ಹಂತದ ವಿದ್ಯಾರ್ಥಿಗಳ ಪ್ರತಿಭೆಗೆ ಸರಿ ಹೊಂದುವಂತಹ ಸ್ಪರ್ಧೆಗಳನ್ನು ಸಂಸ್ಥೆಯು ಯಶಸ್ವಿಯಾಗಿ ಆಯೋಜಿಸಿದ್ದು, ಇದು ಪ್ರಥಮ ಹಂತದಲ್ಲಿಯೇ ಯಶಸ್ವಿಯನ್ನು ಕಂಡಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕವನ್ನು ಮಾತ್ರ ಓದುವುದಲ್ಲ, ಪಠ್ಯಪುಸ್ತಕದಿಂದ ಹೊರ ಬಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳುವುದು ಮುಖ್ಯವಾಗಿದೆ. ಕಾಲೇಜು ಆರಂಭಿಸಿರುವುದು ವ್ಯವಹಾರದ ಉದ್ಧೇಶದಿಂದಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೈಗೆಟಕುವ ಶಿಕ್ಷಣದೊಂದಿಗೆ ಶೇ.ನೂರು ಪ್ರತಿಶತ ಉದ್ಯೋಗ ದೊರಕಿಸಿಕೊಡುವುದಾಗಿದೆ ಎಂದರು.

ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ಅಟೆರ್ನಸ್ ಸ್ಪರ್ಧೆಯ ಕನ್ವೀನರ್ ಸತೀಶ್ ನಾಕ್ ಸ್ವಾಗತಿಸಿ, ಇವೆಂಟ್ ಸಂಯೋಜಕಿ ಆಶಿಕಾ ಫರ್ಝಾನಾ ವಂದಿಸಿದರು. ಕಾಲೇಜಿನ ವ್ಯವಸ್ಥಾಪಕಿ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಆಡಳಿತ ಸಮಿತಿ ಸದಸ್ಯರಾದ ಪ್ರೊ|ಝೇವಿಯರ್ ಡಿ’ಸೋಜ ಹಾಗೂ ನಾರಾಯಣ್ ಪಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇವೆಂಟ್ ಸಂಯೋಜಕಿ ರಶ್ಮಿ ಕೆ ವಿಜೇತರ ಹೆಸರನ್ನು ಓದಿದರು. ಉಪನ್ಯಾಸಕಿ ಭವ್ಯಶ್ರೀ ಬಿ. ಕಾರ್ಯಕ್ರಮ ನಿರೂಪಿಸಿದರು.

ಪಿಯುಸಿ ಜೀವನದ ಆರಂಭ ಮಾತ್ರ..
ವಿದ್ಯಾರ್ಥಿಗಳಿಗೆ ಪಿಯುಸಿ ಕಾಲಘಟ್ಟ ಪ್ರಮುಖವಾದದ್ದು ಮತ್ತು ಇದು ಜೀವನದ ಆರಂಭವಾಗಿದೆ. ಕಥೆ ಈಗಾಗಲೇ ಆರಂಭವಾಗಿದ್ದು ಜೀವನ ಎಂಬ ಕಲ್ಲು-ಮುಳ್ಳುಗಳ ಹಾದಿಯಲ್ಲಿ ವಿದ್ಯಾರ್ಥಿಗಳು ಎಲ್ಲೂ ಎಡವಿ ಬೀಳದೆ ಯಶಸ್ವಿಯಾಗಿ ಡ್ರೈವ್ ಮಾಡಿಕೊಂಡು ಹೋಗಬೇಕಾಗಿದೆ. ಜೀವನದಲ್ಲಿ ಸರಿಯಾದ ಯೋಜನೆ ಹಾಕಿಕೊಳ್ಳುತ್ತಾ, ಸದಾ ಪತ್ರಿಕೆಯನ್ನು ಓದಿ ಸುತ್ತಮುತ್ತಲಿನ ಘಟನೆಗಳನ್ನು ತಿಳಿದುಕೊಳ್ಳುವ ಮತ್ತು ಕಠಿಣ ಪರಿಶ್ರಮದ ಪ್ರಯತ್ನದೊಂದಿಗೆ ಸದಾ ಪ್ರಾಮಾಣಿಕರಾಗಿ ಜೀವನ ನಡೆಸಿದಾಗ ಯಶಸ್ಸು ಖಂಡಿತಾ ದೊರಕಬಲ್ಲುದು.
-ಅಶೋಕ್ ಕುಮಾರ್ ರೈ, ಟ್ರಸ್ಟಿ, ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್

ಸನ್ಮಾನ..
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ|ಕಿಶೋರ್ ಕುಮಾರ್ ಸಿ.ಎಚ್‌ರವರನ್ನು ಕಾಲೇಜು ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಅನಿಸಿಕೆಗಳು…
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅಕ್ಷಯ ಕಾಲೇಜು ವೇದಿಕೆಯನ್ನು ನಿರ್ಮಿಸಿ ಕೊಟ್ಟಿರುವುದು ಅಭಿನಂದನೀಯ. ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಕಾಲೇಜು ಹೊಸತನಕ್ಕೆ, ಹೊಸ ರೂಪ ಪಡೆಯಲು ಹಾಗೂ ನಾವೀನ್ಯತೆ ಹೊಂದಲು ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಭಾಗವಹಿಸಿದ ವಿದ್ಯಾರ್ಥಿಗಳು ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ತೇರ್ಗಡೆ ಹೊಂದಲು ಅನುವು ಮಾಡಿಕೊಟ್ಟಂತಿದ್ದು ಮಾತ್ರವಲ್ಲ ಮಾನವ ಸಂಪನ್ಮೂಲಗಳಲ್ಲಿ ನಾವು ಶ್ರೀಮಂತರಾಗೋಣ.
-ಸಿ.ಪುರುಷೋತ್ತಮ್, ಉಪನ್ಯಾಸಕರು, ಎಕ್ಸೆಲ್ ಕಾಲೇಜು

ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಪ್ರಚುರಪಡಿಸಲು ಅವಕಾಶ ಕೊಟ್ಟಿರುವ ಅಕ್ಷಯ ಕಾಲೇಜಿಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿನ ವ್ಯವಸ್ಥೆಯ ಬಗ್ಗೆ, ಮಾರ್ಗದರ್ಶನ ನೀಡುತ್ತಿರುವ ಗೈಡ್ ಬಗ್ಗೆ, ಪ್ರತಿ ಇವೆಂಟ್ಸ್, ಸಮಯಪಾಲನೆ, ಉಪಹಾರ ಹಾಗೂ ಭೋಜನದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕಾಗಿದೆ.
-ಹಫೀಜ್, ವಿದ್ಯಾರ್ಥಿ, ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು

ಕಾಲೇಜಿನ ಮೂಲ ಸೌಕರ್ಯಗಳು ಅದ್ಭುತ. ಎಲ್ಲದರಲ್ಲೂ ಬೆಸ್ಟ್ ಎನಿಸಿಕೊಂಡಿದೆ. ಈ ಕಾಲೇಜು ಜಾಬ್ ಓರಿಯೆಂಟೆಡ್ ಜೊತೆಗೆ ಜ್ಞಾನ ವೃದ್ಧಿ ಓರಿಯೆಂಟೆಡ್ ಎನಿಸಿಕೊಂಡಿದೆ.
-ಭುವನ್ ಗೌಡ, ಎಕ್ಸೆಲ್ ಪಿಯು ಕಾಲೇಜು, ಗುರುವಾಯನಕೆರೆ
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ ಬದಲಾಗಿ ಭಾಗವಹಿಸುವಿಕೆ ಪ್ರಮುಖವಾಗಿದೆ. ಕಾಲೇಜಿನ ಗೈಡ್ಸ್‌ಗಳು ನಮಗೆ ಉತ್ತಮ ಮಾಗದರ್ಶನ ನೀಡಿದ್ದು ನಾವು ಅವರಿಗೆ ಅಭಾರಿಯಾಗಿದ್ದೇವೆ.
-ದಿಶಾ, ವಿದ್ಯಾರ್ಥಿ, ಅಂಬಿಕಾ ಪಿಯು ಕಾಲೇಜು, ಪುತ್ತೂರು

LEAVE A REPLY

Please enter your comment!
Please enter your name here