ಮಂಗಳೂರು ಡಿ.24 , ಹಾಸ್ಟೆಲ್ ,ಹೋಮ್ ಸ್ಟೇ, ಪೇಯಿಂಗ್ ಗೆಸ್ಟ್ , ಸರ್ವಿಸ್ ಅಪಾರ್ಟ್ ಮೆಂಟ್ , ವಾಣಿಜ್ಯ ಉದ್ದೇಶದ ಗೆಸ್ಟ್ ಹೌಸ್ , ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ಸ್ , ವಸತಿಗೃಹಗಳನ್ನು ನಡೆಸುತ್ತಿರುವ ಮಾಲಕರು , ಪಾಲುದಾರರು , ಆಡಳಿತ ಮಂಡಳಿಯ ಮುಖ್ಯಸ್ಥರು ಸಂಬಂಧಿಸಿದ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಮಂಗಳೂರು ಪೊಲೀಸ್ ಅಯುಕ್ತರಾದ ಎನ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಸಂಸ್ಥೆಯ ರಿಜಿಸ್ಟರ್ ಪುಸ್ತಕವನ್ನು ಕಡ್ಡಾಯವಾಗಿ ಪ್ರತೀ ವರ್ಷ ಪೊಲೀಸ್ ಆಯುಕ್ತರ ಕಛೇರಿಗೆ ಹಾಜರುಪಡಿಸಬೇಕು, ವಿದೇಶಿ ವಿದ್ಯಾರ್ಥಿಗಳು ವಾಸ್ಥವ್ಯ ಹೂಡಿದ ಮತ್ತು ತೆರವುಗೊಳಿಸಿದ 24 ಘಂಟೆಗಳೊಳಗೆ ಸಂಪೂರ್ಣ ಮಾಹಿತಿ ನೀಡುವುದು , ಉತ್ತಮ ಗುಣಮಟ್ಟದ ಸಿ ಸಿ ಕ್ಯಾಮರಗಳನ್ನು ಅಳವಡಿಸುವುದು, ಅದರ ಪೊಟೇಜ್ ಕನಿಷ್ಠ 30 ದಿನಗಳವರೆಗೆ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳುವುದು , ಅಪರಾಧ ಕೃತ್ಯ , ಮಾದಕ ದ್ರವ್ಯ ಮತ್ತು ಅನೈತಿಕ ಕಾನೂನು ಬಾಹಿರ ಚಟುವಟಿಕೆನಡೆಯದಂತೆ ಮುಂಜಾಗೃತೆ ವಹಿಸುವುದು ಸೇರಿದಂತೆ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆ ಜವಾಬ್ದಾರಿಯನ್ನು ಸಂಬಂಧಪಟ್ಟವರು ವಹಿಸಿಕೊಂಡು ಮುಚ್ಚಳಿಕೆ ಪ್ರಮಾಣ ಪತ್ರವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.