ತುಮಕೂರು: ಮಕ್ಕಳ ಮೌಲ್ಯಮಾಪನ ಉದ್ದೇಶದಿಂದ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಪ್ಪಾಗಿ ತಿಳಿದಿದ್ದಾರೆ. ಇದು ಪಬ್ಲಿಕ್ ಪರೀಕ್ಷೆಯಲ್ಲ. ಮತ್ತು ಇದರಲ್ಲಿ ಯಾರನ್ನು ಫೈಲ್ ಮಾಡುವುದಿಲ್ಲ. ವಿದ್ಯಾರ್ಥಿಯ ಕಲಿಕೆಯ ಮೌಲ್ಯಮಾಪನದ ಕೆಲಸ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.