ಬೆಳಗಾವಿ :ಕೋವಿಡ್ 19 ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸಭೆ ನಡೆಸಿದ್ದು ಕಟ್ಟು ನಿಟ್ಟಿನ ಕ್ರಮ ಜಾರಿಗೊಲಿಸಿದೆ. ಸಭೆಯ ಬಳಿಕ ಮಾದ್ಯಮಗಳಿಗೆ ಮಾಹಿತಿ ನಿಡಿದ ಕಂದಾಯ ಸಚಿವ ಆರ್ ಅಶೋಕ್ ಕೋವಿಡ್ ಬಗ್ಗೆ ಯಾರಿಗು ಆತಂಕ ಬೇಡ. ಆದರೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಹೇಳಿದ್ದಾರೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಥಿಯೇಟರ್ ಗೆ ಹೋಗುವ ಸಿನಿ ಪ್ರೀಯರೂ ಮಾಸ್ಕ್ ಧರಿಸಬೇಕು, ಮರೆತು ಬಿಟ್ಟರೆ ವಾಪಸ್ ಬರಬೇಕಾದಿತು ಎಂದು ಎಚ್ಚರಿಸಿದ್ದಾರೆ. ಎಲ್ಲರು ಬೂಸ್ಟರ್ ಡೋಸ್ ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿರುವ ಸಚಿವರು ಹೊಸ ವರ್ಷಾಚರಣೆಗೆ ಮಧ್ಯ ರಾತ್ರಿ ಒಂದು ಘಂಟೆಯ ಡೆಡ್ ಲೈನ್ ವಿಧಿಸಿದ್ದಾರೆ. ಪಬ್ ಬಾರ್ ಸಿಬ್ಬಂಧಿಗಳಿಗೆ ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯವಾಗಿದ್ದು ಮಧ್ಯರಾತ್ರಿ ಒಂದರ ನಂತರ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದಿದ್ದಾರೆ.
ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುವುದು ಮತ್ತು ರಾಜ್ಯದಲ್ಲಿ ಮತ್ತೆ ಲಸಿಕಾ ಕೇಂದ್ರ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.