ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಡಿ.26 ರಿಂದ ಡಿ.28 ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪ್ರಥಮ ದಿನವಾದ ಡಿ.26 .ರಂದು ಬೆಳಗ್ಗೆ 108 ಕಾಯಿ ಗಣಪತಿ ಹವನ, ಮಧ್ಯಾಹ್ನ ಹವನದ ಪೂರ್ಣಾಹುತಿ ಬಳಿಕ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕೆ.ಎಸ್. ಮುಕ್ಕುಡ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಕಾರ್ಯದರ್ಶಿ ಜಗದೀಶ್ ದೇವಸ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯಕುಮಾರ್ ಗೌಡ ಸೂರ್ಯ, ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ವಿ.ಕೆ.ಕುಟ್ಟಿ ಉರಿಮಜಲು, ಉಷಾ ಮುಂಡ್ರಬೈಲು, ಶಶಿಪ್ರಭ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಡಿ.27ರಂದು ಕ್ಷೇತ್ರದಲ್ಲಿ
ಡಿ.27 ರಂದು ಬೆಳಗ್ಗೆ 6ಗಂಟೆಯಿಂದ ಸಾಯಂಕಾಲ 6 ಗಂಟೆಯ ವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ ನಡೆಯಲಿದೆ. ಬೆಳಗ್ಗೆ ಆಶ್ಲೇಶ ಬಲಿ ಪ್ರಾರಂಭಗೊಳ್ಳಲಿದೆ, ಮಧ್ಯಾಹ್ನ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಪಂಚಮಿ ಬಲಿ ಉತ್ಸವ, ವಸಂತಕಟ್ಟೆ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ.