ಪುತ್ತೂರು: 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ 110ಕೆವಿ ಮತ್ತು 33ಕೆ.ವಿ ಲೈನ್ ಬೇ, ಪರಿವರ್ತಕ ಮತ್ತು 11ಕೆವಿ ಫೀಡರುಗಳ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.29ರಂದು (ಗುರುವಾರ) ಪೂರ್ವಾಹ್ನ 10ರಿಂದ ಸಾಯಂಕಾಲ 5ಗಂಟೆಯವರೆಗೆ 33ಕೆ.ವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33ಕೆ.ವಿ ವುತ್ತೂರು-ಸವಣೂರು- ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ 110/33/11ಕೆವಿ ಪುತ್ತೂರು ಹಾಗೂ 33/11ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ಮತ್ತು ಕಾಂಪೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕದಾರರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.