ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ವಾಜಪೇಯಿ ಜನ್ಮದಿನದ ಸೇವಾ ಸುಶಾಸನ್‌ನಲ್ಲಿ ಚಂದ್ರಶೇಖರ್ ರಾವ್ ಬಪ್ಪಳಿಗೆ
ಪುತ್ತೂರು: ಸೈದಾಂತಿಕ ವಿಚಾರದಲ್ಲಿ ದೃಢನಿರ್ಧಾರ ಮತ್ತು ಮಂತ್ರಮುಗ್ಧರನ್ನಾಗಿಸುವ ನಾಯಕತ್ವ ಹೊಂದಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1980ರಲ್ಲಿ ಮುಂಬಯಿಯಲ್ಲಿ ಅಂದೇರ ಚಟೇಗ, ಸೂರಜ್ ನಿಕ್ಲೇಗ, ಕಮಲ್ ಕಿಲೇಗ ಎಂದು ಹೇಳಿದ ಮಾತನ್ನು 2014ರಲ್ಲಿ ನರೇಂದ್ರ ಮೋದಿಯವರು ಸಾಕಾರಗೊಳಿಸಿದರು ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಹೇಳಿದರು. ಕೊಂಬೆಟ್ಟಿನಲ್ಲಿರುವ ಅಟಲ್ ಉದ್ಯಾನದಲ್ಲಿ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ 98ನೇ ಜನ್ಮದಿನಾಚರಣೆಯನ್ನು ಸೇವಾಸುಶಾನ್ ಕಾರ್ಯಕ್ರಮದಲ್ಲಿ ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಬಳಿಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ದಿಕ್ಸೂಚಿ ಭಾಷಣ ಮಾಡಿದರು. ವಾಜಪೇಯಿ ಅವರು ಜನ ಸಂಘದಿಂದ ಜನಸ್ನೇಹಿಯಾಗಿ ಬಿಜೆಪಿಯ ಬಲಾಢ್ಯ ನಾಯಕನಾಗಿ ಬೆಳೆದು ಬಂದ ರೀತಿ ಅದ್ಭುತ. ವಾಜಪೇಯಿ ಅವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಾವು, ನೀವೆಲ್ಲರೂ ನಡೆಯಬೇಕಿದೆ. ರಾಷ್ಟ್ರೀಯ ವಿಚಾರಗಳು, ದೇಶ ಭಕ್ತಿ, ಭಾರತೀಯತೆ, ಸಂಸ್ಕೃತಿ, ಪರಂಪರೆಯ ಕುರಿತು ಹೆಮ್ಮೆ ಪಡುವ ಜೊತೆಗೆ ಅವುಗಳನ್ನು ಭಾರತೀಯರೆಲ್ಲರೂ ಪಾಲಿಸುವಂತೆ ನೋಡಿಕೊಳ್ಳಬೇಕಿದೆ ಎಂದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ, ನಗರ ಸಭಾ ಸ್ಥಳೀಯ ಸದಸ್ಯ ಪಿ.ಜಿ ಜಗನ್ನಿವಾಸ ರಾವ್‌ರವರು ಸ್ವಾಗತಿಸಿ, ಬೂತ್ ಉಪಾಧ್ಯಕ್ಷ ಗಣೇಶ್ ಬಾಳಿಗ ವಂದಿಸಿದರು. ಬೊಳುವಾರು ಶಕ್ತಿ ಕೇಂದ್ರ ಪ್ರಮುಖ್ ನೀಲಂತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಹಿರಿಯರಾದ ಎಸ್. ಅಪ್ಪಯ್ಯ ಮಣಿಯಾಣಿ, ರಾಮಚಂದ್ರ ಘಾಟೆ, ಶೋಭಾ ಪ್ರವೀಣ್, ಪಾಂಡುರಂಗ ನಾಯಕ್, ಪದಂ ಸಿಂಗ್, ಭಾಮಿ ಪದ್ಮನಾಭ ನಾಯಕ್, ಮನೋಹರ್ ರಾಜ ಪುರೋಹಿತ್, ಅನ್ನಪೂರ್ಣ, ಜಯರಾಮ್ ಉಪಸ್ಥಿತರಿದ್ದರು.