ಪುತ್ತೂರು: ಅಡಿಕೆ ಬೆಳೆಯ ಬಗ್ಗೆ ಬಿಜೆಪಿ ಆಡಳಿತದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ತಪ್ಪು ಅಭಿಪ್ರಾಯ ಹೊಂದಿದ್ದು, ದೇಶದ ಅರ್ಥಿಕತೆಗೆ ಮತ್ತು ಆರೋಗ್ಯಕ್ಕೆ ಹಾನಿಕರ ಎಂಬ ಮಾಹಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ಸತತವಾಗಿ ಕೇಂದ್ರ ಮತ್ತು ರಾಜ್ಯ ಸಚಿವರ ಮೂಲಕ ನೀಡುತ್ತಿದ್ದಾರೆ. ಹಾಗಾಗಿ ಸತತವಾಗಿ ನೀಡುತ್ತಿರುವ ತಪ್ಪು ಮಾಹಿತಿಗಳ ವಿರುದ್ಧ ಪ್ರತಿಭಟನೆ ಮತ್ತು ಜಾಗೃತಿ ಕಾರ್ಯಕ್ರಮವು ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ನ ಪ್ರಮುಖ ಸ್ಥಳಗಳಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ತಿಳಿಸಿದ್ದಾರೆ.
ಸರಕಾರ ಅಡಿಕೆ ಕುರಿತು ತಪ್ಪು ಮಾಹಿತಿ ನೀಡುತ್ತಿರುವಾಗ ಸಚಿವ ಎಸ್. ಅಂಗಾರ ಮತ್ತು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರುರವರು ತಾಳೆ ಕೃಷಿ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ಭವಿಷ್ಯವನ್ನು ವ್ಯವಸ್ಥಿತ ರೀತಿಯಲ್ಲಿ ನಾಶ ಮಾಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಯುತ್ತದೆ. ಒಟ್ಟಿನಲ್ಲಿ ಅಡಿಕೆಯನ್ನು ವಿದೇಶದಿಂದ ಅಮದು ಮಾಡಲು ಅನುಮತಿ ನೀಡಿರುವ ಬಗ್ಗೆ, ಅಡಿಕೆ ಮರಗಳಿಗೆ ಬಂದಿರುವ ಮಾರಕ ರೋಗದ ಬಗ್ಗೆ ಸರಕಾರದ ನಿರ್ಲಕ್ಷ್ಯ, ಅಡಿಕೆ ಬೆಳೆಯ ಬಗ್ಗೆ ಸತತವಾಗಿ ನೀಡುತ್ತಿರುವ ತಪ್ಪು ಮಾಹಿತಿಗಳ ವಿರುದ್ಧ ಪ್ರತಿಭಟನೆ ಮತ್ತು ಜಾಗೃತಿ ಕಾರ್ಯಕ್ರಮವು ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ನ ಪ್ರಮುಖ ಸ್ಥಳಗಳಲ್ಲಿ ನಡೆಯಲಿದೆ. ಈ ಪ್ರತಿಭಟನೆ ಮತ್ತು ಜಾಗೃತಿ ಕಾರ್ಯಕ್ರಮವು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ, ಕಾಂಗ್ರೆಸ್ ಕಿಸಾನ್ ಘಟಕ ಮತ್ತು ವಲಯ ಅಧ್ಯಕ್ಷರು ಹಾಗು ಇತರ ಘಟಕದ ಅಧ್ಯಕ್ಷರ ಸಹಯೋಗದೊಂದಿಗೆ ನಡೆಯಲಿದೆ. ಪ್ರತಿಭಟನೆ ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು ಎಂದು ಶಕುಂತಳಾ ಶೆಟ್ಟಿಯವರು ತಿಳಿಸಿದ್ದಾರೆ.