





ಪುತ್ತೂರು : ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಅಧ್ಯಕ್ಷ, ಹಿಂದು ಜಾಗರಣ ವೇದಿಕೆ ಪುತ್ತೂರು ನಗರದ ಮಾಜಿ ಗೌರವಾಧ್ಯಕ್ಷರಾಗಿದ್ದ, ಹಿರಿಯ ಧಾರ್ಮಿಕ ಮುಂದಾಳು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ( 72 ವ)ರವರು ಡಿ. 7 ರಂದು ನಿಧನರಾದರು.




ಕುಂಜಾಡಿ ಪ್ರಕಾಶ್ಚಂದ್ರ ರೈರವರು ಸರಕಾರದ ಅಧೀನದಲ್ಲಿ ಇದ್ದ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದರು, ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದ ಪ್ರಕಾಶ್ ಚಂದ್ರ ರೈ ಕಳೆದ 15 ವರ್ಷಗಳಿಂದ ಸವಣೂರು ಮತ್ತು ಪುತ್ತೂರು ಪರಿಸರದಲ್ಲಿ ಹಿಂದು ಜಾಗರಣ ವೇದಿಕೆಯ ಗೌರಾವಾಧ್ಯಕ್ಷರಾಗಿದ್ದರು, ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಗೌರವ ಹೊಂದಿದ್ದರು. 2016 ರಿಂದ 2025 ರತನಕ 9 ವರ್ಷ ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷರಾಗಿದ್ದರು, ಮುಗೇರು ದೇವಾಲಯ ಮತ್ತು ಆರೇಲ್ತಡಿ ದೇವಸ್ಥಾನದ ಆಡಳಿತ ಸಮಿತಿಯ ಗೌರವ ಸಲಹೆಗಾರರಾಗಿದ್ದರು, ಕೊಡುಗೈ ದಾನಿಯಾಗಿ ಹತ್ತು ಹಲವು ಸಂಘ- ಸಂಸ್ಥೆಗಳ ಅಭಿವೃದ್ದಿಗೆ ದುಡಿದ್ದಾರೆ. ಮೃತರು ಪತ್ನಿ ರಮಾ ಪ್ರಕಾಶ್ಚಂದ್ರ ರೈ, ಪುತ್ರ ಕೆಪಿಟಿಸಿಎಲ್ ನಲ್ಲಿ ಉನ್ನತ ಅಧಿಕಾರಿಯಾಗಿರುವ ಶಶಾಂಕ್ ರೈ, ಸೊಸೆ ಇಂಚರ ರೈ, ಸಹೋದರ ಕುಂಜಾಡಿ ಪ್ರಪುಲ್ಲಚಂದ್ರ ರೈ, ಸಹೋದರಿಯರಾದ ಸುಪ್ರಭಾ ರೈ, ಲತಾ ಶೆಟ್ಟಿ ಹಾಗೂ ಸುಧಾ ಶೆಟ್ಟಿ ಅವರನ್ನು ಅಗಲಿದ್ದಾರೆ.





ಇಂದು ಬೆಳಿಗ್ಗೆ 11 ಗಂಟೆಗೆ ಮೃತರ ಅಂತ್ಯ ಸಂಸ್ಕಾರ ಕುಂಜಾಡಿ ತರವಾಡು ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.







