




ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರೂ ಸಾಮಾಜಿಕ ಹೋರಾಟಗಾರರು ಆಗಿರುವ ಕೆಯ್ಯೂರು ಗ್ರಾಮದ ಮೇಗಿನ ಇಳಂತಾಜೆ ಪದ್ಮನಾಭ ರೈಯವರಿಗೆ ಕೆಯ್ಯೂರು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಶ್ರದ್ಧಾಂಜಲಿ ಸಭೆಯು ದ.3ರಂದು ಕೆಯ್ಯೂರು ಜಯ ಕರ್ನಾಟಕ ಸಭಾ ಭವನದಲ್ಲಿ ನಡೆಯಿತು. ಮೃತರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.





ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಪ್ರಗತಿ ಪರ ಕೃಷಿಕ ಬಾಲಕೃಷ್ಣ ರೈ ನೆಟ್ಟಾಳ, ಕೆಯ್ಯೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಮಾಜಿ ಬೂತ್ ಅಧ್ಯಕ್ಷ ಜಯರಾಮ ಶೆಟ್ಟಿ ಇಳಂತಾಜೆ,ಶಕ್ತಿ ಕೇಂದ್ರದ ಸಂಚಾಲಕರಾದ ಶರತ್ ಕುಮಾರ್ ರೈ ದೇರ್ಲ, ಮೃತರ ಪುತ್ರ ಸುಕುಮಾರ ರೈರವರುಗಳು ಪದ್ಮನಾಭ ರೈಯವರ ಸಾಮಾಜಿಕ ಜೀವನದ ಬಗ್ಗೆ ಗುಣಗಾನ ಮಾಡಿ ನುಡಿ ನಮನ ಸಲ್ಲಿಸಿದರು.





ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಬಳಜ್ಜ, ಶೀನಪ್ಪ ರೈ ದೇರ್ಲ, ಕೃಷಿಕ ಕೊರಗಪ್ಪ ರೈ ಸಣಂಗಳ, ಕೆಯ್ಯೂರು ಪಂಚಾಯತ್ ಸದಸ್ಯರುಗಳಾದ ಮಮತಾ ಎಸ್, ತಾರಾನಾಥ ಕಂಪ,ವಿಜಯ ಕುಮಾರ್ ಸಣಂಗಳ, ಮಾಜಿ ಅಧ್ಯಕ್ಷ ಬಾಬು ಬೊಮ್ಮನಗುಂಡಿ, ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಕೆಯ್ಯೂರು, ನೂಜಿ ವೇಣುಗೋಪಾಲ ರೈ, ಮೋಹನ ಗೌಡ ಎರಕ್ಕಲ, ಜಗನ್ನಾಥ ರೈ ದೇರ್ಲ, ಸಾಗು ವಿಶ್ವನಾಥ ಶೆಟ್ಟಿ, ಸತೀಶ ರೈ ಕೆಯ್ಯೂರು, ಶಿವರಾಮ ರೈ ಕಜೆ, ಲೋಹಿತಾಕ್ಷ ರೈ ಮಠ, ರವಿ ಕುಮಾರ್ ಕೈತಡ್ಕ, ದೀಪ ಎಸ್.ರೈ, ಅನಿಲ್ ರೈ ದೇರ್ಲ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.









