ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕ ಹೆಲ್ಮೆಟ್ ದರಿಸಿಲ್ಲ ಎಂದು ಪೊಲೀಸರು ದಂಡ ವಿಧಿಸುವುವುದಿದೆ ಆದರೆ ಇದಕ್ಕೆ ತದ್ವಿರುದ್ದ ಎನ್ನುವಂತೆ ಕಾರಿನಲ್ಲಿ ಪ್ರಯಾಣಿಸಿದ ಸಹ ಪ್ರಯಾಣಿಕ ಹೆಲ್ಮೆಟ್ ದರಿಸಿಲ್ಲ ದಂಡ ವಿಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
500ರೂ ದಂಡ ಪಾವತಿಸುವಂತೆ ಕಾರು ಚಾಲಕ ಓರ್ವರಿಗೆ ನೋಟಿಸ್ ಬಂದಿದ್ದು ಶಾಕ್ ನೀಡಿದೆ. ನವೆಂಬರ್ 29 ರಂದು ಮಂಗಳಾದೇವಿ ರಸ್ತೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದ್ದು ಸಹ ಪ್ರಯಾಣಿಕ ಹೆಲ್ಮೆಟ್ ದರಿಸಿಲ್ಲ ಹಾಗಾಗಿ ದಂಡ ಪಾವತಿಸಿ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಮಾತ್ರವಲ್ಲದೆ ಅದರಲ್ಲಿ ಕಾರು ಮತ್ತು ಹೆಲ್ಮೆಟ್ ದರಿಸಿಲ್ಲ ಎಂಬುದನ್ನು ಬೇರೆ ಬೇರೆ ಕಾಲಂ ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಡಿ.22ರಂದು ನೋಟಿಸ್ ಕಾರು ಚಾಲಕಮ ಕೈ ಸೇರಿದೆ.
ನೋಟಿಸ್ ನಲ್ಲಿ ನಿಯಮ ಉಲ್ಲಂಘನೆಯ ಚಿತ್ರವಿದ್ದು ದ್ವಿಚಕ್ರ ವಾಹನದ ಸಹ ಸವಾರ ಹೆಲ್ಮೆಟ್ ದರಿಸದೇ ಇರುವುದು ಕಾಣುತ್ತಿದೆ. ಇದೇ ದ್ವೀಚಕ್ರದ ಬಳಿಯಲ್ಲಿ ಕಾರು ಕೂಡ ಇದ್ದು ಅಟೋಮೇಷನ್ ಸೆಂಟರ್ನಲ್ಲಿ ನಡೆದ ತಪ್ಪಿನಿಂದ ದ್ವಿಚಕ್ರ ವಾಹನದ ಮಾಲಿಕನ ಬದಲು ಕಾರಿನ ಮಾಲಿಕನಿಗೆ ನೋಟಿಸ್ ನೀಡಿರುವ ಸಾದ್ಯತೆ ಇದೆ ಎನ್ನಲಾಗಿದೆ.