ದ.31: ಕೊಳ್ತಿಗೆ ಶಾಲಾ ಪ್ರಭಾರ ಮುಖ್ಯಶಿಕ್ಷಕ ಮಾಯಿಲಪ್ಪ ಗೌಡ ಕೆ. ನಿವೃತ್ತಿ

0

ಪುತ್ತೂರು: ಕೊಳ್ತಿಗೆ ಹಿ.ಪ್ರಾ.ಶಾಲಾ ಪ್ರಭಾರ ಮುಖ್ಯಶಿಕ್ಷಕ ಮಾಯಿಲಪ್ಪ ಗೌಡ ಕೆ.ರವರು ಡಿ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.

1996 ರಲ್ಲಿ ಸುಳ್ಯ ತಾಲೂಕಿನ ಪುಳಿಕುಕ್ಕು ಶಾಲೆಗೆ ಕರ್ತವ್ಯಕ್ಕೆ ಸೇರಿದ ಇವರು ಬಳಿಕ 1999ರಿಂದ ಕೊಳ್ತಿಗೆ ಶಾಲೆಯಲ್ಲಿ ಸಹಶಿಕ್ಷಕರಾಗಿ, 2012ರಿಂದ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಲಿದ್ದಾರೆ. ಕೊಳ್ತಿಗೆ ಗ್ರಾಮದ ಕಂಟ್ರಮಜಲು ಬೇರಿಕೆ ನಿವಾಸಿಯಾದ ಇವರು ಪತ್ನಿ ಉದಯ ಕುಮಾರಿ ಕೆ. ಪುತ್ರಿಯರಾದ ತೃಪ್ತಿ ಕೆ.ಎಂ., ದೀಪ್ತಿ ಕೆ.ಎಂ., ಸ್ಪೂರ್ತಿ ಕೆ.ಎಂ.ರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here