ಸವಣೂರು ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಾಗಾರ

0

  • ಸವಣೂರು ಶಾಖೆಯಿಂದ ಉತ್ತಮ ಸೇವೆ- ತಿಮ್ಮಪ್ಪ ಗೌಡ
  • ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ಪ್ರಥಮ– ಪ್ರದೀಪ್ ಗೌಡ

ಪುತ್ತೂರು: ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖೆಯಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಾಗಾರ ದ. 30 ರಂದು ಬ್ಯಾಂಕಿನಲ್ಲಿ ಜರಗಿತು.

ಚಿತ್ರ- ಉಮಾಪ್ರಸಾದ್ ರೈ ನಡುಬೈಲು

 ಅಧ್ಯಕ್ಷತೆ ವಹಿಸಿದ್ದ ಸವಣೂರು ಸಿ.ಎ.ಬ್ಯಾಂಕಿನ ನಿರ್ದೇಶಕ ತಿಮ್ಮಪ್ಪ ಗೌಡ ಮುಂಡಾಳುರವರು ಮಾತನಾಡಿ ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖೆಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಇಲ್ಲಿನ ಬ್ಯಾಂಕ್ ಮೇನೇಜರ್ ಮತ್ತು ಸಿಬ್ಬಂಧಿಗಳು ಗ್ರಾಹಕರೊಂದಿಗೆ ಉತ್ತಮ ವ್ಯವಹಾರವನ್ನು ಮಾಡುತ್ತಿದ್ದು, ಬ್ಯಾಂಕ್ ಸವಣೂರು ಆಸುಪಾಸಿನ ಜನರ ಜೀವನಾಡಿಯಾಗಿ ಎಂದು ಹೇಳಿದರು.


ಚಂದ್ರಕಲಾ ಜಯರಾಮ್ ಅರುವಗುತ್ತುರವರು ಕಾರ‍್ಯಕ್ರಮವನ್ನು ದೀಪ ಬೆಳಗಿಸಿ,ಉದ್ಘಾಟಿಸಿದರು. ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ಪ್ರಥಮ- ಪ್ರದೀಪ್ ಗೌಡ ಕುಂಬ್ಲಾಡಿ ಕುಕ್ಕೆನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರದೀಪ್ ಆರ್ ಗೌಡರವರು ಮಾತನಾಡಿ ಜಗತ್ತಿನಲ್ಲಿ ಭಾರತ ಡಿಜಿಟಲ್ ಪೇಮೆಂಟ್ ವ್ಯವಹಾರದಲ್ಲಿ ಮೊದಲ ಸ್ಥಾನದಲ್ಲಿ ಇದ್ದು, ಗ್ರಾಹಕರು ಆಧುನಿಕ ಯುಗದ ಬದಲಾವಣೆಗೆ ಅನುಗುಣವಾಗಿ ಹೊಂದಿಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ದ,ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ಬ್ಯಾಂಕ್ ಆಗಿದ್ದು, ಸವಣೂರು ಶಾಖೆಯ ಪ್ರಗತಿಯನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದರು.


ಸಂಪನ್ನೂಲ ವ್ಯಕ್ತಿಯಾದ ಎಸ್‌ಸಿಡಿಸಿಸಿ ಬ್ಯಾಂಕ್ ಬೆಳ್ಳಾರೆ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ರವರು ಬ್ಯಾಂಕ್ ಖಾತೆ ನಿರ್ವಹಣೆ, ಬ್ಯಾಂಕ್‌ನಿಂದ ದೊರೆಯುವ ಸಾಲ ಸೌಲಭ್ಯ, ಇನ್ಸೂರೆನ್ಸ್ ಮುಂತಾದ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ನಿಭಾ ಬಿ.ರೈಯವರಿಗೆ ಗೌರರ್ವಪಣೆ
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ನಿಭಾ ಬಿ.ರೈ ಕೆರೆಕೋಡಿರವರನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖೆಯ ವತಿಯಿಂದ ಗೌರವಿಸಲಾಯಿತು.

ಬ್ಯಾಂಕಿನ ಸವಣೂರು ಶಾಖಾ ಮೇನೇಜರ್ ವಿಶ್ವನಾಥ್ ಸ್ವಾಗತಿಸಿ, ಸಿಬ್ಬಂಧಿ ಮಲ್ಲಿಕಾ ವಂದಿಸಿದರು. ನಿಭಾ ಬಿ.ರೈ ಕೆರೆಕೋಡಿ ಪ್ರಾರ್ಥನೆಗೈದರು. ಸವಣೂರು ಸಿ.ಎ, ಬ್ಯಾಂಕ್‌ನ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಕಾರ‍್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಸವಣೂರು ಸಿ.ಎ.ಬ್ಯಾಂಕಿನ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ, ಮಾಸ್ ಸವಣೂರು ಶಾಖಾ ಮೇನೇಜರ್ ಯತೀಶ್, ಸವಣೂರು ಅನನ್ಯ ಜುವೆಲ್ಸ್ ಮಾಲಕ ಪದ್ಮನಾಭ ಆಚಾರ್ಯ, ಚಾರ್ವಾಕ ಸಿ.ಎ.ಬ್ಯಾಂಕಿನ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಪಿ, ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖೆಯ ಸಿಬ್ಬಂಧಿಗಳಾದ ದಿನೇಶ್, ಪ್ರತೀಕ್ಷಾ, ಮಲ್ಲಿಕಾ, ಶೋಭಾ ಬಿ.ರೈ, ಬ್ಯಾಂಕಿನ ನಿತ್ಯನಿಧಿ ಸಂಗ್ರಾಹಕ ಬಾಲಚಂದ್ರ ರೈ ಕೆರೆಕೋಡಿ, ನವೋದಯ ಸ್ವಸಹಾಯ ಸಂಘದ ಪ್ರೇರಕಿ ಕಲ್ಪವಳ್ಳಿ ಹಾಗೂ ಬ್ಯಾಂಕಿನ ಗ್ರಾಹಕರು ಉಪಸ್ಥಿತರಿದ್ದರು.

ಎಸ್‌ಸಿಡಿಸಿಸಿ ಸವಣೂರು ಶಾಖೆಯಲ್ಲಿ 50 ಕೋಟಿ ರೂ ಠೇವಣಿ
ಸವಣೂರು ಆಸುಪಾಸಿನ ಗ್ರಾಹಕರ ಅಚ್ಚು ಮೆಚ್ಚಿನ ಬ್ಯಾಂಕ್ ಆಗಿ ಎಸ್‌ಸಿಡಿಸಿಸಿ ಸವಣೂರು ಶಾಖೆಯು ಕಾರ‍್ಯನಿರ್ವಹಿಸುತ್ತಿದ್ದು, ೨೦೦೪ರಲ್ಲಿ ಸಹಕಾರ ರತ್ನ ಸವಣೂರು ಸೀತಾರಾಮ ರೈರವರ ಉಸ್ತುವಾರಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ಸ್ವಂತ ಜಾಗದಲ್ಲಿ ಸ್ವಂತ ಕಟ್ಟಡದಲ್ಲಿ ಬ್ಯಾಂಕಿನ ಸವಣೂರು ಶಾಖೆ ಆರಂಭಗೊಂಡಿದೆ. ಸವಣೂರು ಶಾಖೆಯು ಗ್ರಾಹಕರಿಗೆ ೬೦ ಕೋಟಿ ರೂ ವಿವಿಧ ರೀತಿಯ ಸಾಲ ನೀಡಿದ್ದು, ೫೦ ಕೋಟಿ ರೂ, ಠೇವಣಿಯನ್ನು ಹೊಂದಿದೆ. ಶೇ ೧೦೦ ಸಾಲ ವಸೂಲಾತಿ ಆಗಿದ್ದು, ೧೩೦ ಸ್ವಸಹಾಯ ಸಂಘಗಳಿಗೆ ೨.೩೦ ಕೋಟಿ ರೂ ಸಾಲವನ್ನು ನೀಡಲಾಗಿದೆ.
ವಿಶ್ವನಾಥ್ –ಮೇನೇಜರ್ ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖೆ

LEAVE A REPLY

Please enter your comment!
Please enter your name here