ಜಿಪಂ, ತಾಪಂ ಕ್ಷೇತ್ರ ಮರುವಿಂಗಡಣೆ ಕರಡು ಪ್ರಕಟ

0

ಜಿ.ಪಂ. ತಾ.ಪಂ ಸದಸ್ಯರ ಸಂಖ್ಯೆ, ಕ್ಷೇತ್ರಗಳ ಗಡಿ ನಿಗದಿ ಮಾಡಿದ ಡೀಲಿಮಿಟೇಶನ್ ಆಯೋಗ/ ಆಕ್ಷೇಪಣೆ ಸಲ್ಲಿಕೆಗೆ ಜ.16 ಕೊನೆಯ ದಿನ

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಸದಸ್ಯರ ಸಂಖ್ಯೆ ಮತ್ತು ಕ್ಷೇತ್ರಗಳ ಗಡಿಯನ್ನು ‘ಕರ್ನಾಟಕ ಪಂಚಾಯತ್’ ರಾಜ್, ಸೀಮಾ ನಿರ್ಣಯ ಆಯೋಗ’ ನಿಗದಿಗೊಳಿಸಿದ್ದು, ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಸದಸ್ಯರ ಸಂಖ್ಯೆ ಮತ್ತು ಕ್ಷೇತ್ರಗಳು ಒಳಗೊಂಡಿರುವ ಗ್ರಾಮಗಳ ವಿವರ, ಗಡಿ ಇತ್ಯಾದಿಗಳೊಂದಿಗೆ ಕರಡು ಗೆಜೆಟ್ ಪ್ರಕಟಿಸಲಾಗಿದೆ.

ಕೆಲವು ಬದಲಾವಣೆ: ಜಿಲ್ಲಾ ಪಂಚಾಯತ್‌ಗೆ ಸಂಬಂಧಪಟ್ಟಂತೆ ಕೆಲವು ಜಿಲ್ಲೆಗಳಲ್ಲಿ ಕ್ಷೇತ್ರಗಳ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಿದೆ. ಬಳ್ಳಾರಿ ಜಿಲ್ಲೆ ವಿಜಯನಗರ ಜಿಲ್ಲೆ ರಚಿಸಿರುವುದರಿಂದ ತಲಾ 28 ಕ್ಷೇತ್ರ ಹಂಚಿಕೆಯಾಗಿದೆ. ಕೆಲವು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗಿದೆ.

ಆಕ್ಷೇಪಣೆಗಳು ಇದ್ದಲ್ಲಿ ಜ.16ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಅಥವಾ ಖುದ್ದಾಗಿ/ಅಂಚೆಯ ಮೂಲಕ ಸಲ್ಲಿಸಬಹುದು.

ನಿಗದಿಪಡಿಸಿದ ದಿನದ ನಂತರ ಸಲ್ಲಿಸುವ ಆಕ್ಷೇಪಣೆ ಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ವೆಬ್‌ಸೈಟ್ ವಿಳಾಸ https://rdpr.karnata ka.gov.in/rdc/public/ನಲ್ಲಿ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ 222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ಬೀದಿ, ಬೆಂಗಳೂರು-560001 ಈ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಬಹುದು.

LEAVE A REPLY

Please enter your comment!
Please enter your name here