ಮಿತ್ತೂರು:ಬೆಳಗಾವಿ ಜಿಲ್ಲೆಯ ಮಹಿಳೆ ಮಗು ಸಮೇತ ನಾಪತ್ತೆ

0

ಪುತ್ತೂರು:ಮಿತ್ತೂರು ಮಸೀದಿ ಸಮೀಪ ಕೆಲಸಕ್ಕೆ ಬಂದಿದ್ದ ಬೆಳಗಾವಿ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗುವಿನ ಸಮೇತವಾಗಿ ನಾಪತ್ತೆಯಾಗಿದ್ದಾರೆ.


ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಪಕೀರಪ್ಪ ಎಂಬವರ ಪತ್ನಿ ದ್ಯಾಮವ್ವ(25ವ) ಮತ್ತು ಅವರ ಮೂರು ವರ್ಷದ ಮಗು ಸಮರ್ಥ್ ನಾಪತ್ತೆಯಾದವರು. ದ್ಯಾಮವ್ವ ತನ್ನ ಮೂರು ವರ್ಷದ ಮಗುವಿನ ಜೊತೆಗೆ ಮಿತ್ತೂರು ಮಸೀದಿ ಬಳಿ ಕೆಲಸಕ್ಕೆ ಬಂದಿದ್ದರು. ಡಿ.27ರ ಮಧ್ಯಾಹ್ನದಿಂದ ಅವರು ನಾಪತ್ತೆಯಾಗಿದ್ದಾರೆ. ಈ ಕುರಿತು ಆಕೆಯ ಸಂಬಂಧಿ ಹನುಮವ್ವ ಗದಿಗೆಪ್ಪ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here