ಪುತ್ತೂರಿನದ್ದೇ ಬ್ರ್ಯಾಂಡ್ ಹೆಮ್ಮೆಯ ವಿಚಾರ- ಜಿ.ಎಲ್.ಬಲರಾಮ ಆಚಾರ್ಯ
ಪುತ್ತೂರು: : ಭಾರತ ಆತ್ಮ ನಿರ್ಭರ ದೇಶವಾಗಬೇಕು ಎಂಬುದು ಸಮಸ್ತ ಭಾರತೀಯರ ಕನಸು. ಪ್ರಧಾನಿ ನರೇಂದ್ರ ಮೋದಿ ಅವರ ’ವೋಕಲ್ ಫಾರ್ ಲೋಕಲ್’ ಮಂತ್ರಕ್ಕೆ ತಕ್ಕಂತೆ ಪುತ್ತೂರಿನಲ್ಲಿ ಕಳೆದ 22 ವರ್ಷಗಳಿಂದ ಟಿ.ವಿ ದುರಸ್ಥಿಯಲ್ಲಿ ಅನುಭವಿ ಹೊಂದಿರುವ ಜಿ.ಎಲ್. ಕಾಂಪ್ಲೆಕ್ಸ್ನಲ್ಲಿನ ಟಿವಿ ಕ್ಲೀನಿಕ್ನ ಮಾಲಕ ಸತ್ಯಶಂಕರ್ರವರ ಹೊಸ ಚಿಂತನೆಯಂತೆ ದೀರ್ಘ ಕಾಲಿಕ ಬಾಳ್ವಿಕೆಯುಳ್ಳ ಟೆಲಿವಿಷನ್ ಬ್ರ್ಯಾಂಡ್ನ ’ಎಸ್.ಟಿ.ವಿ.ಸಿ’ ಎಲ್ಇಡಿ ಸ್ಮಾರ್ಟ್ ಟಿವಿ ಜ.3ರಂದು ಸಂಸ್ಥೆಯಲ್ಲಿ ಬಿಡುಗಡೆಗೊಂಡಿತ್ತು. ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ ಅವರು ಟಿವಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಅವರು ನೂತನ ಬ್ರ್ಯಾಂಡೆಡ್ ಟಿವಿಯ ಪ್ರಥಮ ಖರೀದಿ ಮಾಡಿದರು.
ಪುತ್ತೂರಿನದ್ದೇ ಬ್ರ್ಯಾಂಡ್ ಹೆಮ್ಮೆಯ ವಿಚಾರ : ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ ಅವರು ಮಾತನಾಡಿ, ನಾನು 15 ವರ್ಷದಿಂದ ಸತ್ಯಶಂಕರ್ ಅವರನ್ನು ನೋಡುತ್ತಿದ್ದೇನೆ. ನಾನು ಕಂಡುಕೊಂಡಂತೆ ಅವರೊಬ್ಬ ಕನಸುಗಾರ ಮಾತ್ರವಲ್ಲ. ಕನಸನ್ನು ನನಸು ಮಾಡುವವರು. ಅವರ ಸಂಸ್ಥೆ ಹಂತ ಹಂತವಾಗಿ ಬೆಳೆಯುತ್ತಿದೆ. ಟಿವಿ ರಿಪೇರಿಯ ಅನುಭವದೊಂದಿಗೆ ಹಿಡಿದು ಇವತ್ತು ಪುತ್ತೂರಿಗೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ. ದೊಡ್ಡ ದೊಡ್ಡ ಮಳಿಗೆಗೆ ಹೋಗಿ ವಸ್ತು ಖರೀದಿಸಿ ಬಳಿಕ ಗ್ಯಾರೆಂಟಿ ಪಿರೇಡ್ನಲ್ಲಿ ಕೆಟ್ಟು ಹೋದಾಗ ಅಲ್ಲಿ ಅವರು ಕಂಪೆನಿ ನಂಬರ್ ಕೊಡುತ್ತಾರೆ. ಆದರೆ ಸತ್ಯಶಂಕರ್ ಹಾಗಲ್ಲ ಏನೇ ಆಗಲಿ ’ನೀವು ತನ್ನಿ ನಾನು ನೋಡುತ್ತೇನೆ’ ಎಂಬ ಅವರ ಮನೋಭಾವದ ಮಾತು ಗ್ರಾಹಕರಿಗೆ ಧೈರ್ಯ ತುಂಬುತ್ತದೆ ಎಂದರು. ಈಗ ಅವರದ್ದೇ ಬ್ರಾಂಡ್ನ ಎಲ್ಇಡಿ ಸ್ಮಾರ್ಟ್ ಟಿವಿ ಬಂದಿರುವುದು ಪುತ್ತೂರಿಗೆ ಹೆಮ್ಮೆಯ ವಿಚಾರ ಎಂದರು.
ಕೆನರಾ ಬ್ಯಾಂಕ್ನ ರೀಜಿನಲ್ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವೈ. ನರೇಂದ್ರ ರೆಡ್ಡಿ ಅವರು ಮಾತನಾಡಿ, ಮಾರಾಟದೊಂದಿಗೆ ಉತ್ತಮ ಸೇವೆ ನೀಡುವ ಈ ಸಂಸ್ಥೆಯು ಇನ್ನಷ್ಟು ಗ್ರಾಹಕರ ಪ್ರೀತಿಗೆ ಪಾತ್ರವಾಗಲಿ ಎಂದು ಹಾರೈಸಿದರು. ಪುತ್ತೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಮೊಹಮ್ಮದ್ ಅಶ್ರಫ್, ಸಂಸ್ಥೆಯ ಹಿತೈಷಿ ಜಯರಾಮ ಬಲ್ಯಾಯ ಶುಭಹಾರೈಸಿದರು.
ಪ್ರಥಮ ಖರೀದಿಯ ಟಿ.ವಿ ಜಿ.ಎಲ್.ಮಾಲ್ಗೆ: ಜಿ.ಎಲ್.ಬಲರಾಮ ಆಚಾರ್ಯ ಅವರು ನೂತನ ಬ್ರ್ಯಾಂಡ್ನ ಎಸ್ಟಿವಿಸಿಯ ಪ್ರಥಮ ಖರೀದಿ ಮಾಡಿದರು. ಖರೀದಿ ಮಾಡಿದ ಟಿವಿಯನ್ನು ನಮ್ಮದೇ ಜಿ.ಎಲ್.ಮಾಲ್ನಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಗಣೇಶ್ ಪ್ರಸಾದ್ ಹೊಟೇಲ್ ಮಾಲಕ ಗೋಪಾಲಕೃಷ್ಣ ಹೇರಳೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಸಂಸ್ಥೆಯ ಮಾಲಕರ ತಂದೆ ವೆಂಕಟ್ರಮಣ ಭಟ್, ತಾಯಿ ರತ್ನಾವತಿ ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರ ಪತ್ನಿ ಸ್ಮಿತಾ ಶಂಕರ್, ಪಶುಪತಿ ಎಂಟರ್ಪ್ರೈಸಸ್ನ ಅನ್ನಪೂರ್ಣ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಮಾಲಕರ ಅಣ್ಣ ಪಶುಪತಿ ಶರ್ಮ ಸ್ವಾಗತಿಸಿ, ವಂದಿಸಿದರು.
ದೀರ್ಘಕಾಲ ಬಾಳಿಕೆ
ನಾನು 22 ವರ್ಷದ ಹಿಂದೆ ಪರ್ಲಡ್ಕದಲ್ಲಿ ಟಿ.ವಿ ದುರಸ್ಥಿ ಮಾಡುವ ಶಂಕರ್ ಇಲೆಕ್ಟ್ರಾನಿಕ್ಸ್ ಆರಂಭಿಸಿದ್ದೆ. ಬಳಿಕ ಜಿ.ಎಲ್. ಕಾಂಪ್ಲೆಕ್ಸ್ನಲ್ಲಿ ಸಹ ಸಂಸ್ಥೆ ಟಿ.ವಿ.ಕ್ಲಿನಿಕ್ ನಡೆಸುತ್ತಿದ್ದೇನೆ. ಈ ಸಂದರ್ಭ ಎಲ್ಲಾ ಮಾದರಿಯ ಟಿವಿಗಳ ದುರಸ್ಥಿ ಮಾಡಿದ ಅನುಭವದಿಂದ ಹೊಸ ಎಲ್ಇಡಿಟಿವಿ ಬ್ರ್ಯಾಂಡ್ ಆರಂಭಿಸುವ ಚಿಂತನೆ ಮೂಡಿತ್ತು. ಟಿವಿಗಳ ಸ್ಕ್ರೀನ್, ಬೋರ್ಡ್, ಬ್ಯಾಕ್ಲೈಟ್, ಇತರ ಬಿಡಿಭಾಗಗಳು ಫ್ಯಾಕ್ಟರಿಯಲ್ಲಿ ತಯಾರಾಗುತ್ತದೆ. ಬಳಿಕ ಅದನ್ನು ಮಾರ್ಕೆಟಿಂಗ್ ಮಾಡಲು ಅವರವರ ಬ್ರ್ಯಾಂಡ್ ಮಾಡಿಕೊಂಡು ಅಲ್ಲಿಯೇ ಖರಿದೀಸಿ ಜೋಡಣೆ ಮಾಡಿ ಮಾರ್ಕೆಟಿಂಗ್ ಮಾಡುತ್ತಾರೆ. ಇದೆಲ್ಲವನ್ನು ನನ್ನ ಹಲವು ವರ್ಷದ ಅನುಭವದಿಂದ ಅರಿತು ಅತೀ ಹೆಚ್ಚು ಬಾಳಿಕೆ ಬರುವ ಪ್ಯಾನಲ್, ಬೋರ್ಡ್, ಸ್ಪೀಕರ್ಗಳನ್ನು ಮತ್ತು ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಎಸ್ಟಿವಿಸಿ ಎಲ್ಇಡಿ ಟಿವಿ ಯನ್ನು ತಯಾರಿಸಿದೇವೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಈ ಟಿವಿಗಳಿವೆ.
ಸತ್ಯಶಂಕರ್, ಮಾಲಕರು ಟಿ.ವಿ.ಕ್ಲಿನಿಕ್