ನೆಲ್ಯಾಡಿ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವದ ಅಂಗವಾಗಿ ಜ.5 ಹಾಗೂ 6 ರಂದು ನೇಮೋತ್ಸವ ನಡೆಯಿತು.
ಜ.5 ರಂದು ಸಂಜೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ, ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಕಲ್ಲುರ್ಟಿ ದೈವದ ನೇಮ, ಅನ್ನಸಂತರ್ಪಣೆ, ದೈಯೊಂಕ್ಲು, ಮೈಸಂದಾಯ ನೇಮ, ಧೂಮಾವತಿ, ಭಾವನ ದೈವದ ನೇಮ ನಡೆಯಿತು.
ಜ.6 ರಂದು ಪೂರ್ವಾಹ್ನ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೇಮ, ಮಧ್ಯಾಹ್ನ ಬಟ್ಟಲು ಕಾಣಿಕೆ ಮತ್ತು ಕೈಕಾಣಿಕೆ, ಹರಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರೂ ಆದ ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ, ಸಮಿತಿ ಅಧ್ಯಕ್ಷ ನಾರಾಯಣ ಭಟ್ ಟಿ.ರಾಮಕುಂಜ, ಸಂಚಾಲಕ ಕೃಷ್ಣಮೂರ್ತಿ ಇ.ಕಲ್ಲೇರಿ, ಉಪಾಧ್ಯಕ್ಷ ಪ್ರಸನ್ನ ನಿಸರ್ಗ, ಧಾರ್ಮಿಕ ಮಾರ್ಗದರ್ಶಕ ಎ.ಮಾಧವ ಆಚಾರ್ಯ ಇಜ್ಜಾವು, ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್‌ಪ್ರಸಾದ್ ಕಾಯಾರ, ಸದಸ್ಯರಾದ ಎಂ.ಹರಿನಾರಾಯಣ ಆಚಾರ್ ಎರಟಾಡಿ, ಶೇಖರ ಕಟ್ಟಪುಣಿ, ಡಾ| ಜಿನಚಂದ್ರ ಕಾರ್ಕಳ, ಬಿ.ಸಂಜೀವ ಪೂಜಾರಿ ಬಟ್ಲಡ್ಕ, ಮಹಾಬಲ ರೈ ರಾಮಜಾಲು ಸೇರಿದಂತೆ ಊರ, ಪರವೂರಿನ ಭಕ್ತಾದಿಗಳು ಉಪಸ್ಥಿತರಿದ್ದರು.