ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕೂಟೇಲು ಕುಟುಂಬದ ಹಾಗೂ ಗ್ರಾಮ ದೈವಗಳಿಗೆ ನೇಮ ನಡಾವಳಿ ಕಾರ್ಯಕ್ರಮ ಜ.೪ರಿಂದ 6 ರವರೆಗೆ ಕೂಟೇಲು ತರವಾಡು ಮನೆಯಲ್ಲಿ ನಡೆಯಿತು.
ಜ.4 ರಂದು ಬೆಳಿಗ್ಗೆ 6 ರಿಂದ ಕಲಶ ಶುದ್ಧಿ, ಗಣಪತಿ ಹೋಮ, ನಾಗತಂಬಿಲ, ಹೊರೆಕಾಣಿಕೆ ಸಮರ್ಪಣೆ, ಸಬ್ಬಮ್ಮ ದೇವಿಯ ಪೂಜೆ, ಶ್ರೀಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೇವಸ್ಯ ತರವಾಡು ಮನೆಯಿಂದ ಕೋಡಿಯಡ್ಕ ರಾಜನ್ ದೈವ ಕಲ್ಕುಡ, ಬೊಳಂದೂರು ಗ್ರಾಮ ಪಂಜುರ್ಲಿ ಹಾಗೂ ಅಂಕರಡ್ಕ ಮನೆಯಿಂದ ಕಲ್ಲುರ್ಟಿ ದೈವಗಳ ಭಂಡಾರ ಆಗಮಿಸಿ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು.
ಜ.5 ರಂದು ಬೆಳಿಗ್ಗೆ ಕುಟುಂಬದ ಕಲ್ಲುರ್ಟಿ ಹಾಗೂ ಬಲ್ನಾಡು ಕಲ್ಲುರ್ಟಿ ಭಂಡಾರ ತೆಗೆದು ನೇಮೋತ್ಸವ, ಅನ್ನಸಂತರ್ಪಣೆ, ಸಂಜೆ ಏಳ್ನಾಡು ದೈವದ ನೇಮೋತ್ಸವ ನಡೆಯಿತು.
ಜ.6 ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ದೈವದ ನೇಮ, ಗುಳಿಗ ದೈವದ ನೇಮೋತ್ಸವ ನಡೆಯಿತು.
ಕೂಟೇಲು ಕುಟುಂಬದ ಯಜಮಾನ ಪೆರ್ನು ಗೌಡ ಕೂಟೇಲು, ತರವಾಡು ಮನೆಯ ತಿಮ್ಮಪ್ಪ ಗೌಡ ಕೂಟೇಲು, ಕುಟುಂಬ ಸಮಿತಿ ಅಧ್ಯಕ್ಷ ಅಚ್ಯುತ ಗೌಡ ಬಾಳಿಲ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.