ಚಿತ್ರ: ಸುಧಾಕರ್ ಕಾಣಿಯೂರು
ಕಾಣಿಯೂರು: ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮಾಚಿಲ ಶ್ರೀ ಉಳ್ಳಾಕುಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವವು ಜ 7ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು.
ಡಿ 31ರಿಂದ ಮೊದಲ್ಗೊಂಡು ಜ7ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಮತ್ತು ಮಾಚಿಲ ಶ್ರೀ ಉಳ್ಳಾಕುಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಿತು. ಜ 7ರಂದು ಬೆಳಿಗ್ಗೆ ಶ್ರೀ ಉಳ್ಳಾಕ್ಲು ನೇಮೋತ್ಸವ, ಸಂಜೆ ಶ್ರೀ ಉಳ್ಳಾಲ್ತಿ ಭಂಡಾರ ತೆಗೆದು, ಶ್ರೀ ನಾಲ್ಕಂಭ ಕ್ಷೇತ್ರಕ್ಕೆ ಶ್ರೀ ಉಳ್ಳಾಲ್ತಿ ಭಂಡಾರ ಆಗಮನ, ಬಳಿಕ ಶ್ರೀ ಉಳ್ಳಾಲ್ತಿ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಮೋಕ್ತೆಸರರಾದ ನಾರ್ಣಪ್ಪ ಗೌಡ ಮಾಚಿಲ, ಕ್ಷೇತ್ರೇಶರಾದ ಪೆರ್ಗಡೆ ಗೌಡ ಮಾಚಿಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಮ್ ಅರುವಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಂ. ವೆಂಕಪ್ಪ ಗೌಡ ಮಾಚಿಲ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಯು.ಪಿ ರಾಮಕೃಷ್ಣ ಗೌಡ ಗುಜ್ಜರ್ಮೆ, ಅಧ್ಯಕ್ಷ ಪ್ರದೀಪ್. ಆರ್. ಗೌಡ ಅರುವಗುತ್ತು, ಉಪಾಧ್ಯಕ್ಷರಾದ ಪ್ರವೀಣ್ ಕುಂಟ್ಯಾನ, ದೇವಯ್ಯ ಗೌಡ ಖಂಡಿಗ, ವಿಜಯಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿ ಜತ್ತಪ್ಪ ಗೌಡ ಉದ್ಲಡ್ಡ, ಕೋಶಾಧಿಕಾರಿ ವಿಶ್ವನಾಥ ಅಂಬುಲ, ಉಪ ಕಾರ್ಯದರ್ಶಿ ವಿಜಿತ್ ಮಾಚಿಲ, ಅರ್ಚಕ ಗಣಪತಿ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಕಾಶ್ ಗೌಡ ಅರುವ, ವೆಂಕಪ್ಪ ಗೌಡ ಕಂಪ, ವಸಂತ ಕುಂಬಾರ ಕೊಪ್ಪ, ಸುಮಲತಾ ದೇವಸ್ಯ, ಸುಲೋಚನಾ ಮಿಯೋಳ್ಪೆ, ಕಿನ್ನಿಗ ಓಡದಕೆರೆ, ಆಡಳಿತ ಪಂಗಡ ಸಂಚಾಲಕ ಸುಂದರ ಗೌಡ ದೇವಸ್ಯ, ಉಪ ಸಂಚಾಲಕ ಶಶಿಧರ ವಜ್ರಡ್ಕ, ಕಾರ್ಯದರ್ಶಿ ಜನಾರ್ದನ ಗೌಡ ಕೆಳಗಿನಕೇರಿ, ಉಪ ಕಾರ್ಯದರ್ಶಿ ಲೋಹಿತ್ ಮಿಯೋಳ್ಪೆ, ಕೋಶಾಧಿಕಾರಿ ವಾಸಪ್ಪ ಗೌಡ ಖಂಡಿಗ ಕಲ್ಪಡ, ಒಂಬತ್ತು ಮನೆಯವರು ಮತ್ತು ಕೂಡುಕಟ್ಟಿನವರು ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.