ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ಪರಿವಾರಗಳ ವತಿಯಿಂದ ದೇವಳದ ಹೊರಾಂಗಣದಲ್ಲಿ ನಡೆಯುವ ಸಾಂಸ್ಕೃತಿಕ ಸಪ್ತಾಹದಲ್ಲಿ ಜ.10 ರಂದು ನೆಲ್ಲಿಕಟ್ಟೆ ಮಮ ಪರಿವಾರದಿಂದ ಭಕ್ತಿಸುಧೆಯ ‘ಚಿಂತನ ಮಂಥನ’ ಕಾರ್ಯಕ್ರಮ ನಡೆಯಿತು.
ಸಂಜೆ ಗಂಟೆ 4.30 ರಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಭಜನೆ, ಚೆಂಡೆ ವಾದನ, ಧಾರ್ಮಿಕ ಪ್ರವಚನ, ಕೊಳಲು ವಾದನ, ನೃತ್ಯ ಸಂಭ್ರಮ, ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ನಯನಾ ರೈಯವರ ನೇತೃತ್ವದಲ್ಲಿ ಭಜನೆ, ದೇವಿಬೆಟ್ಟ ಶ್ರೀರಾಮ ಚೆಂಡೆ ಬಳಗದಿಂದ ಚೆಂಡೆ ನೃತ್ಯ, ಸನಾತನಾ ಸಂಸ್ಥೆಯ ಆನಂದ್ ಅವರಿಂದ ಸಂಸ್ಕೃತಿ, ಸಂಸ್ಕಾರ ಮತ್ತು ಆಚಾರ ವಿಚಾರಗಳ ಕುರಿತು ಧಾರ್ಮಿಕ ಉಪನ್ಯಾಸ, ಡಾ| ಪಿ.ಕೆ.ಗಣೇಶ್ ಅವರಿಂದ ಸ್ಯಾಕ್ಸೋಪೋನ್, ವಿದುಷಿ ಶಾಲಿನಿ ಆತ್ಮಭೂಷಣ್ ಅವರ ನೇತೃತ್ವದಲ್ಲಿ ನೃತ್ಯ ಸಂಭ್ರಮ, ಚಂದ್ರಶೇಖರ್ ಹೆಗ್ಡೆ ಅವರ ನೇತೃತ್ವದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು. ಮಮ ಪರಿವಾರದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸುಧೀರ್ ನೋಂಡಾ, ಹರಿಪ್ರಸಾದ್ ನೆಲ್ಲಿಕಟ್ಟೆ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಇಂದುಶೇಖರ್ ಚಿಕ್ಕಪುತ್ತೂರು ಮತ್ತು ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ಡಾ. ಸುಧಾ ಎಸ್ ರಾವ್, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ವೀಣಾ ಬಿ.ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಳ್ ಕಾರ್ಯಕ್ರಮ ನಿರೂಪಿಸಿದರು.
ಇಂದು ಕುರಿಯ, ತೆಂಕಿಲ ಮಮ ಪರಿವಾರದಿಂದ ಕಾರ್ಯಕ್ರಮ
ಜ.11ರಂದು ಸಂಜೆ ಕುರಿಯ ಮಮ ಪರಿವಾರದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕುರಿಯ ಮಹಾವಿಷ್ಣು ಭಜನಾ ಮಂದಿರದ ಭಜನಾ ಮಂಡಳಿಯವರಿಂದ ಭಜನೆ/ ಕುಣಿತ ಭಜನೆ, ತೆಂಕಿಲ ಮಮ ಪರಿವಾರದ ಧೀಶಕ್ತಿ ಬಾಲಿಕಾ ಯಕ್ಷ ಬಳಗ ತೆಂಕಿಲ ಇವರಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.