ಬನ್ನೂರು ನವೋದಯ ಯುವಕ ವೃಂದದ ವಠಾರದಲ್ಲಿ ಸತ್ಯನಾರಾಯಣ ಪೂಜೆ, ಯುವಜನೋತ್ಸವ

0

ಪುತ್ತೂರು: ಬನ್ನೂರು ನವೋದಯ ಯುವಕ ವೃಂದ, ಯುವತಿ ವೃಂದ, ಮಹಿಳಾ ಮಂಡಲದ ಆಶ್ರಯದಲ್ಲಿ ೩೭ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಯುವಜನೋತ್ಸವ ಜ.7ರಂದು ನವೋದಯ ಯುವಕ ವೃಂದದ ವಠಾರದಲ್ಲಿ ನಡೆಯಿತು.


ಸಂಜೆ ನಡೆದ ಯುವಜನೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರು ಮಾತನಾಡಿ, ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಸಾಮರ್ಥ್ಯವಿರುವಂತಹ ಯುವಜನರಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಉತ್ಸಾಹವನ್ನು ತುಂಬುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ನವೋದಯ ಸಂಸ್ಥೆ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಕೃಷಿ ಅಧಿಕಾರಿ ಪದ್ಮಯ್ಯ ಗೌಡರವರು ಶುಭ ಹಾರೈಸಿದರು.


ಅಭಿವೃದ್ಧಿಗೆ ಭರವಸೆ:

ನಗರಸಭೆ ಸ್ಥಳೀಯ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ ಅವರು ಮಾತನಾಡಿ, ಸಂಘದ ಮೂಲಕ ನಡೆಯುವ ಹಲವಾರು ಕಾರ್ಯಕ್ರಮಗಳಿಂದ ಯುವಜನರಿಗೆ ಉತ್ತಮ ಮಾರ್ಗದರ್ಶನ ಸಿಗುತ್ತಿದೆ. ಮುಂದೆ ನವೋದಯ ಸಂಸ್ಥೆಯ ಕೆಲವೊಂದು ಬೇಡಿಕೆಗೆ ಪೂರಕವಾಗಿ ಸ್ಪಂಧಿಸುವ ಭರವಸೆ ವ್ಯಕ್ತಪಡಿಸಿದರು.

ನಿವೃತ್ತರಿಗೆ ಸನ್ಮಾನ:

ಅಬಕಾರಿ ಇಲಾಖೆಯ ನಿವೃತ್ತ ಎಸ್.ಐ ಅಂಗಾರ ಪಿ, ನಗರಸಭೆಯ ನಿವೃತ್ತ ಕಂದಾಯ ನಿರೀಕ್ಷಕ ರಾಧಾಕೃಷ್ಣ ಗೌಡ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ರೂಪಕಲಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.


ನಗರಸಭಾ ಸದಸ್ಯೆ ಪ್ರೇಮಲತಾ ಜಿ, ನವೋದಯ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ನಗರಸಭಾ ಸದಸ್ಯೆ ಗೌರಿ ಬನ್ನೂರು, ನವೋದಯ ಯುವಕ ವೃಂದದ ಸಂಚಾಲಕ ಚಂದ್ರಾಕ್ಷ ಬಿ.ಎನ್, ಕಾರ್ಯದರ್ಶಿ ರೋಹಿತ್ ರೈ, ನಿವೃತ್ತ ಅಧಿಕಾರಿ ನಾಗೇಶ್ ಆಚಾರ್ಯ, ನವೋದಯ ಮಹಿಳಾ ಮಂಡಲದ ಕಾರ್ಯದರ್ಶಿ ಸುಲೋಚನಾ ರಾಧಾಕೃಷ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೋದಯ ಯುವಕ ವೃಂದದ ಅಧ್ಯಕ್ಷ ಯು.ರಾಧಾಕೃಷ್ಣ ರೈ ಬನ್ನೂರು ಸ್ವಾಗತಿಸಿ, ಮಹಿಳಾ ಮಂಡಲದ ಅಧ್ಯಕ್ಷೆ ಮಾಲತಿ ಆನಂದ್ ವಂದಿಸಿದರು. ರಾಧಾಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ವಾಗ್ದೇವಿ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಸಂಗೀತ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here