ಪುತ್ತೂರು: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು ಮಳಿಗೆಯಲ್ಲಿ ನಡೆಯುತ್ತಿರುವ ವಜ್ರಾಭರಣಗಳ ಉತ್ಸವ ‘ಗ್ಲೋ ಫೆಸ್ಟ್’ ಗ್ರಾಹಕರ ಅಪೇಕ್ಷೆಯಂತೆ ಜ. 25ರ ವರೆಗೆ ಮುಂದುವರೆಯಲಿದೆ.
ಈ ವಜ್ರಾಭರಣಗಳ ಉತ್ಸವ ‘ಗ್ಲೋ ಫೆಸ್ಟ್’ನಲ್ಲಿ ಸಾವಿರಕ್ಕೂ ಮಿಕ್ಕಿದ ಡಿಸೈನ್ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಗ್ರಾಹಕರಿಗೆ ಅಹ್ಲಾದಕರ ಖರೀದಿಯ ವಾತಾವರಣ ಇಲ್ಲಿದ್ದು ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಆಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳ ಸಂಗ್ರಹ ಇಲ್ಲಿದೆ. ರೂ 3,೦೦೦/-ದಿಂದ ಮೊದಲ್ಗೊಂಡು ವಜ್ರದ ಮೂಗುತಿಗಳು, ರೂ 10,೦೦೦/-ದಿಂದ ಮೊದಲ್ಗೊಂಡು ವಜ್ರದ ಕಿವಿಯೋಲೆಗಳು, ಉಂಗುರಗಳು ಹಾಗೂ ಪೆಂಡೆಂಟ್ಗಳು, ರೂ 35,೦೦೦/-ದಿಂದ ಮೊದಲ್ಗೊಂಡು ವಜ್ರದ ಬಳೆಗಳು ಮತ್ತು ರೂ 1,25,೦೦೦/-ದಿಂದ ಮೊದಲ್ಗೊಂಡು ವಜ್ರದ ನೆಕ್ಲೇಸ್ಗಳು ಆಕರ್ಷಕ ವಿನ್ಯಾಸಗಳಲ್ಲಿ ಲಭ್ಯವಿದೆ.
‘ಗ್ಲೋ ಫೆಸ್ಟ್’ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತೀ ಕ್ಯಾರೆಟ್ಗೆ ರೂ. 5,೦೦೦/- ವರೆಗೆ ರಿಯಾಯಿತಿ, ಆಯ್ದ ವಜ್ರಾಭರಣಗಳ ಪ್ರತೀ ಖರೀದಿಯ ಮೇಲೆ ರೂ. 7,೦೦೦/- ವರೆಗೆ ರಿಯಾಯಿತಿ ಇದೆ. ಸಂಸ್ಥೆಯು ಡಿಜಿಟಲ್ ಪೇಮೆಂಟ್ಗೆ ಪ್ರಾಮುಖ್ಯತೆ ನೀಡುತ್ತಿದ್ದು UPI / IMPS / Rupay Card ಬಳಸಿ ಬಿಲ್ ಪಾವತಿಸುವ ಗ್ರಾಹಕರಿಗೆ ರೂ. 500/- ಹೆಚ್ಚುವರಿ ರಿಯಾಯಿತಿ ಮಾತ್ರವಲ್ಲದೆ ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.