




ಪುತ್ತೂರು : ಮಂಗಳೂರಿನ ಪಡೀಲ್ ಜಂಕ್ಷನ್ ಬಳಿಯ ಹೆಸರಾಂತ ಟೊಯೋಟಾ ಕಾರು ಡೀಲರ್ ಸಂಸ್ಥೆ ಯುನೈಟೆಡ್ ಟೊಯೋಟಾ ಇದರ ಸಹಸಂಸ್ಥೆ ಪುತ್ತೂರು- ಉಪ್ಪಿನಂಗಡಿ ರಸ್ತೆ ಕೇಪುಳು ಬಳಿಯಿರುವ ಯುನೈಟೆಡ್ ಟೊಯೋಟಾದಲ್ಲಿ ಎರಡು ದಿನ ನಡೆಯಲಿರುವ ಎಕ್ಸ್ಚೇಂಜ್ ಮೇಳಕ್ಕೆ ಜ.13 ರಂದು ಚಾಲನೆ ನೀಡಲಾಯಿತು. ಅತ್ಯಾಧುನಿಕ ತಂತ್ರಜ್ಞಾನ ವನ್ನೊಳಗೊಂಡ ವಿನೂತನ, ಆಕರ್ಷಕ ಮಾದರಿಯ ಕಾರುಗಳ ಪ್ರದರ್ಶನ ಹಾಗೂ ವಿನಿಮಯ ಮೇಳ ಮತ್ತು ಹಲವು ಪ್ರಮುಖ ಕಂಪೆನಿಗಳ ಉಪಯೋಗಿಸಿದ ಕಾರುಗಳ ಬೃಹತ್ ಪ್ರದರ್ಶನವೂ ಇದ್ದು, ಅನೇಕ ಗ್ರಾಹಕರು ಈ ಮಹೋತ್ಸವದ ಪ್ರಯೋಜನ ಪಡೆದುಕೊಂಡಿದ್ದಾರೆ.









ಸ್ಥಳದಲ್ಲೇ ಕಾರು ಬುಕಿಂಗ್ ಮಾಡೋ ಗ್ರಾಹಕರಿಗೆ ಸ್ಪೆಷಲ್ ಕೊಡುಗೆಗಳು, ಗ್ರಾಹಕರ ಹಳೇ ಕಾರಿನ ಮೌಲ್ಯ ಮಾಪನ, ಆಕರ್ಷಕ ವಿನಿಮಯ ಕೊಡುಗೆಗಳ ಜೊತೆಗೆ ಸರಳ, ಸುಲಭ, ಶೀಘ್ರ ಫೈನಾನ್ಸ್ನೊಂದಿಗೆ ಅತೀ ಕಡಿಮೆ ಇಎಂಐ ವ್ಯವಸ್ಥೆ ಇದ್ದು ಜ.14ರ ಸಂಜೆ ಮೇಳ ತೆರೆ ಕಾಣಲಿದೆ. ಕಾರು ಪ್ರಿಯರಿಗೆ ಇದೊಂದು ಉತ್ತಮ ಅವಕಾಶವನ್ನು ಯುನೈಟೆಡ್ ಸಂಸ್ಥೆ ಒದಗಿಸಿಕೊಟ್ಟಿದ್ದು ಕಾರು ಪ್ರಿಯರು ಈ ಮಹೋತ್ಸವ ಮೂಲಕ ಟೊಯೋಟಾ ಕಾರಿನ ಮಾಲೀಕರಾಗೋ ಅತ್ಯುತ್ತಮ ಸಮಯ. ಜೊತೆಯಲ್ಲಿ ಭರ್ಜರಿ ಕೊಡುಗೆಗಳ ಅವಕಾಶ ಕೈ ಜಾರದಂತೆ ಗ್ರಾಹಕರು ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ವಿನಂತಿಸಿದೆ.

ಹಲವು ಮಾದರಿಯ, ಹಲವು ಕಂಪೆನಿಯ ಕಾರುಗಳೂ ಅತ್ಯುತ್ತಮ ಬೆಲೆಯಲ್ಲಿದ್ದು, ವಿನಿಮಯಕ್ಕೆ ಉತ್ತಮ ಲಾಭ ಸಿಗಲಿದ್ದು, ಇಂದು ಸಂಜೆ ಮೇಳ ಕೊನೆಯಾಗಲಿದೆ. ಮಾಹಿತಿಗಾಗಿ 9686687581 ಸಂಪರ್ಕಿಸಿರಿ








