ನಾಕೌಟ್ ಮಾದರಿಯ ಪಂದ್ಯಾಟ: 15 ವಿವಿ ತಂಡಗಳು ಮುಂದಿನ ಹಂತಕ್ಕೆ
ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೊದಲ ದಿನ ನೌಕೌಟ್ ಮಾದರಿಯ ಪಂದ್ಯಾಟಗಳು ನಡೆದು 15 ವಿವಿ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.
ಬೆಳಗ್ಗೆ ಎಂಟು ಗಂಟೆಗೆ ಪಂದ್ಯಾಟ ಆರಂಭವಾಗಿದ್ದು, ಮಧುರೈ ಕಾಮರಾಜು ವಿವಿಯು ಟಿಎನ್‌ಪಿಯುಎಸ್‌ಯು ಚೆನ್ನೈ ತಂಡವನ್ನು 35-34, 35-27 ಅಂಕಗಳಿಂದ ಸೋಲಿಸಿತು. ಬೆಂಗಳೂರು ಸಿಟಿ ತಂಡವು ಮೌಲನಾ ಅಝಾದ್ ತಂಡವನ್ನು 35-07, 35-14 ಅಂಕಗಳಿಂದ ಸೋಲಿಸಿ ಮುಂದಿನ ಹಂತ ಪ್ರವೇಶಿಸಿತು. ವಿಟಿಯು ಬೆಳಗಾಂ ತಂಡವು ಕುವೆಂಪು ಯುನಿವರ್ಸಿಟಿ ತಂಡದಿಂದ 32-35, 35-29, 35-27 ಅಂಕಗಳಿಂದ ಮುನ್ನಡೆ ಸಾಧಿಸಿದೆ. ಸಾವಿತ್ರಿ ಭಾಯಿ ಫುಲೆ ಯುನಿವರ್ಸಿಟಿ ತಂಡವು ರಾಜ್‌ಶಂಕರ್ ಷಹ್ ತಂಡವನ್ನು 35-17, 35-08 ಅಂಕಗಳಿಂದಸೋಲಿಸಿದೆ. ದಾವಣಗೆರೆ ಯುನಿವರ್ಸಿಟಿ ತಂಡವು ರವಿಶಂಕರ್ ಶುಕ್ಲಾ ಯುನಿವರ್ಸಿಟಿ ತಂಡವನ್ನು 35-28, 35-31 ತಂಡದಿಂದ ಅಂಕಗಳಿಂದಸೋಲಿಸಿತು. ಜೆಆರ್‌ಎನ್ ರಾಜಸ್ತಾನ್ ತಂಡವು ವಿಕ್ರಂ ಸಿಂಹಾಪುರಿ ತಂಡವನ್ನು 35-11, 35-10 ಅಂಕಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಟಿ.ಎಂ. ಬಗಲಾಪುರ್ ತಂಡವು ಒಸ್ಮಾನಿಯಾ ಯುನಿವರ್ಸಿಟಿ ತಂಡವನ್ನು 35-28, 35-22 ಅಂಕಗಳಿಂದ ಮಣಿಸಿತು. ಎಸ್‌ವಿ ಯುನಿವರ್ಸಿಟಿ ತಂಡವು ಜೆಎನ್‌ಟಿಯು ಅನಂತಪುರ್ ತಂಡವನ್ನು 35-12, 35-21 ಅಂಕಗಳಿಂದ ಸೋಲಿಸಿತು. ಜೆಎನ್‌ಟಿಯು ಕಾಕಿನಾಡ ತಂಡವು ಶ್ರೀ ಕುಶಾಲ್‌ದಾಸ್ ಯನಿವರ್ಸಿಟಿ ತಂಡವನ್ನು 35-11, 35-10 ಅಂಕಗಳಿಂದ ಸೋಲಿಸಿತು. ಉಟ್ಕಾಲ್ ಯುನಿವರ್ಸಿಟಿ ತಂಡವು ಹೇಮಚಂದ್ರ ಎನ್‌ಜಿ ಯುನಿವರ್ಸಿಟಿ ತಂಡವನ್ನು 35-21, 35-22 ಅಂಕಗಳಿಂದ ಸೋಲಿಸಿತು. ಮುಂಬೈ ಯುನಿವರ್ಸಿಟಿ ತಂಡವು ರಾಣಿ ಚೆನ್ನಮ್ಮ ಯುನಿವರ್ಸಿಟಿ ತಂಡವನ್ನು 35-28, 35-29 ಅಂಕಗಳಿಂದ ಸೋಲಿಸಿತು. ಮೈಸೂರು ಯುನಿವರ್ಸಿಟಿ ತಂಡವು ಜೆಎನ್‌ಟಿಯು ಹೈದ್ರಾಬಾದ್ ತಂಡವನ್ನು 35-32, 35-24 ಅಂಕಗಳಿಂದ ಸೋಲಿಸಿತು. ಆರ್‌ಟಿಎಂ ಯುನಿವರ್ಸಿಟಿ ತಂಡವು ಬೆಹ್‌ರಾಂಪುರ್ ತಂಡವನ್ನು 38-36, 35-22 ಅಂಕಗಳಿAದ ಸೋಲಿಸಿತು. ಕೇರಳ ಯುನಿವರ್ಸಿಟಿ ತಂಡವು ಡಾ. ವೈಎಸ್‌ಆರ್ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ತಂಡವನ್ನು 35-13, 35-18 ಅಂಕಗಳಿಂದ ಸೋಲಿಸಿತು. ಕಾಕಿಟಾಯ ಯುನಿವರ್ಸಿಟಿ ತಂಡವು ರಾಜಸ್ತಾನ್ ಯುನಿವರ್ಸಿಟಿ ತಂಡದಿಂದ 35-09, 35-10 ಅಂಕಗಳಿಂದ ಮುನ್ನಡೆ ಸಾಧಿಸಿತು.
ಆಚಾರ್ಯ ನಾಗಾರ್ಜುನ ಯುನಿವರ್ಸಿಟಿ ತಂಡವು ಅಟಲ್ ಬಿಹಾರಿ ಯುನಿವರ್ಸಿಟಿ ತಂಡದಿಂದ 35-19, 35-22 ಅಂಕಗಳಿಂದ ಮುನ್ನಡೆ ಸಾಧಿಸಿದೆ. ಎಂ.ಎಸ್. ಯುನಿವರ್ಸಿಟಿ ತಂಡವು ಕೆಬಿಎಸ್ ನಾರ್ತ್ ಮಹ್ ಯುನಿವರ್ಸಿಟಿ ತಂಡವನ್ನು 35-22, 35-25 ಅಂಕಗಳಿಂದ ಸೋಲಿಸಿತು. ಮಹಾತ್ಮಗಾಂಧಿ ಯುನಿವರ್ಸಿಟಿ ತಂಡವು ಪಾಟ್ನಾ ಯುನಿವರ್ಸಿಟಿ ತಂಡವನ್ನು 35-24, 35-24 ಅಂಕಗಳಿಂದ ಸೋಲಿಸಿತು. ಭಾರತಿದಾಸನ್ ಯುನಿವರ್ಸಿಟಿ ತಂಡವು ಬರ್‍ಕಾತುಲ್ಲಾಹ್ ಯುನಿವರ್ಸಿಟಿ ತಂಡವನ್ನು 35-19, 35-14 ಅಂಕಗಳಿಂದ ಸೋಲಿಸಿತು. ಕೃಷ್ಣಾ ಯುನಿವರ್ಸಿಟಿ ತಂಡವು ಪಾಂಡಿಚೇರಿ ಯುನಿವರ್ಸಿಟಿ ತಂಡವನ್ನು 35-21, 35-30 ಅಂಕಗಳಿಂದಸೋಲಿಸಿತು. ಮದ್ರಾಸ್ ಯುನಿವರ್ಸಿಟಿ ತಂಡವು ಸಂತ ಘಾಡ್ಗೆ ಬಾಬಾ ಯುನಿವರ್ಸಿಟಿ ತಂಡವನ್ನು 35-18, 35-32 ಅಂಕಗಳಿಂದ ಸೋಲಿಸಿತು. ಯುನಿವರ್ಸಿಟಿ ಆಫ್ ಕ್ಯಾಲಿಕಟ್ ತಂಡವು ಬೆಂಗಳೂರು ನಾರ್ತ್ ಯುನಿವರ್ಸಿಟಿ ತಂಡವನ್ನು 35-15, 35-21 ಅಂಕಗಳಿಂದ ಸೋಲಿಸಿತು. ಪೆರಿಯಾರ್ ಯುನಿವರ್ಸಿಟಿ ತಂಡವು ಕರ್ನಾಟಕ ಯುನಿವರ್ಸಿಟಿ ತಂಡವನ್ನು 35-16, 35-21 ಅಂಕಗಳಿಂದ ಸೋಲಿಸಿತು. ಭಾರತೀಯರ್ ಯುನಿವರ್ಸಿಟಿ ತಂಡವು ರಾಮಕೃಷ್ಣ ಮಿಷನ್ ತಂಡವನ್ನು 35-19, 35-15ಅಂಕಗಳಿಂದ ಸೋಲಿಸಿತು. ರಾಯಲ್‌ಸೀಮಾ ಯುನಿವರ್ಸಿಟಿ ತಂಡವು ಆರ್‌ಟಿಎಂ ನಾಗಪುರ್ ಯುನಿವರ್ಸಿಟಿ ತಂಡವನ್ನು 35-23, 35-17 ಅಂಕಗಳಿಂದ ಸೋಲಿಸಿತು. ಕೆಎಸ್‌ಎನ್‌ಯುಎಎಚ್‌ಎಸ್ ತಂಡವು ದಾವಣಗೆರೆ ಯುನಿವರ್ಸಿಟಿ ತಂಡವನ್ನು 35-28, 20-35, 35-31 ಅಂಕಗಳಿಂದ ಸೋಲಿಸಿತು. ಮಧುರೈ ಕಾಮರಾಜು ಯುನಿವರ್ಸಿಟಿ ತಂಡವು ಅಲಗಪ್ಪ ಯುನಿವರ್ಸಿಟಿ ತಂಡವನ್ನು 36-34, 35-27 ಅಂಕಗಳಿಂದ ಸೋಲಿಸಿತು. ವಿಟಿಯು ಬೆಳಗಾವಿ ತಂಡವು ಬೆಂಗಳೂರು ಸಿಟಿ ಯುನಿವರ್ಸಿಟಿ ತಂಡವನ್ನು 35-31, 35-22 ಅಂಕಗಳಿಂದ ಸೋಲಿಸಿತು. ವಿನಾಯಕ ಮಿಷನ್ ಯುನಿವರ್ಸಿಟಿ ತಂಡವು ಸಾವಿತ್ರಿ ಭಾಯಿ ಫುಲೆ ತಂಡವನ್ನು 35-19, 35-37, 35-21 ಅಂಕಗಳಿಂದ ಸೋಲಿಸಿತು. ವಿಕ್ರಮ ಸಿಂಹಾಪುರಿ ಯುನಿವರ್ಸಿಟಿ ತಂಡವು ಎಲ್‌ಎನ್‌ಎಂ ಯುನಿವರ್ಸಿಟಿ ಮಿಥಿಲಾ ತಂಡವನ್ನು 35-21, 35-31 ಅಂಕಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.