ಮೊದಲನೇ ದಿನ ಮೈಸೂರು, ಮದ್ರಾಸ್, ಬೆಳಗಾವಿ ತಂಡಗಳಿಗೆ ಮುನ್ನಡೆ
ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022-23ರ ಮೊದಲನೇ ದಿನವಾದ ಶನಿವಾರ ನಡೆದ ಪಂದ್ಯಾಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ತಂಡ, ಮದ್ರಾಸ್ ವಿಶ್ವವಿದ್ಯಾನಿಲಯ ತಂಡ ಮತ್ತು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಗಳು ಮುನ್ನಡೆ ಸಾಧಿಸಿದೆ.
ಮಧುರೈ ಕಾಮರಾಜ ವಿಶ್ವವಿದ್ಯಾನಿಲಯ ಮತ್ತು ಅಲಗಪ್ಪ ವಿ.ವಿ ಕರೈಕುಡಿ ಚೆನೈ ನಡುವೆ ನಡೆದ ಪಂದ್ಯಾಟದ ರೋಚಕ ಕ್ಷಣ.
ಮೊದಲ ದಿನ ನಡೆದ ನಾಕೌಟ್ ಮಾದರಿಯ ಪಂದ್ಯಾಟದಲ್ಲಿ ಸುಮಾರು 30 ಪಂದ್ಯಾವಳಿಗಳು ನಡೆದಿದ್ದು, 15 ವಿ.ವಿ. ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದ್ದು, ಅವುಗಳು ಈ ಕೆಳಗಿನಂತಿವೆ.
ಆಚಾರ್ಯ ನಾಗಾರ್ಜುನ ವಿವಿ., ಎಂ.ಎಸ್. ವಿವಿ., ಮಹಾತ್ಮಾ ಗಾಂಧಿ ವಿ.ವಿ., ಭಾರತಿದಾಸನ್ ವಿ.,ವಿ., ಕೃಷ್ಣ ವಿವಿ., ಯುನಿವರ್ಸಿಟಿ ಆಫ್ ಮದ್ರಾಸ್, ಯುನಿವರ್ಸಿಟಿ ಆಫ್
ಕ್ಯಾಲಿಕಟ್, ಪೆರಿಯಾರ್ ವಿವಿ., ಭರತೇಯರ್ ವಿ.ವಿ., ರಾಯಲ್‌ಸೀಮಾ ವಿವಿ., ಕೆಎಸ್‌ಎನ್‌ಯುಎಎಚ್‌ಎಸ್. ವಿ.ವಿ., ಮದುರೈ ಕಾಮರಾಜ್ ವಿವಿ., ವಿಟಿಯು. ಬೆಳಗಾವಿ ವಿವಿ., ವಿನಾಯಕ ಮಿಷನ್ ವಿ.ವಿ., ವಿಕ್ರಮ ಸಿಂಹಪುರಿ ವಿ.ವಿ. ಈ ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಗೊಂಡಿರುತ್ತದೆ.