ಪುತ್ತೂರು; ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.25ರಿಂದ 31ರ ತನಕ ನಡೆಯಲಿರುವ ದೇವರ ಅಷ್ಟಬಂದ ಬ್ರಹ್ಮಕಲಶೋತ್ಸವ, ನೂತನ ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಜ.14ರಂದು ಬಿಡುಗಡೆಗೊಂಡಿತು.
ಪ್ರಾರಂಭದಲ್ಲಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಉಮಾಮಹೇಶ್ವರ ಸೇವಾ ಟ್ರಸ್ಟ್ ಗೌರವ ಸಲಹೆಗಾರರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿರುವ ಜಯರಾಮ ಕೆದಿಲಾಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಉಪ್ಪಳ, ಉಪಾಧ್ಯಕ್ಷ ಕೆ.ಯಂ ಬೆಳಿಯಪ್ಪ ಗೌಡ ಕೆದ್ಕಾರ್, ಕಾರ್ಯದರ್ಶಿ ಯ.ಕೇಶವ ಪೂಜಾರಿ ಮುಕ್ವೆ, ಕೋಶಾಧಿಕಾರಿ ನವೀನ ರೈ ಶಿಬರ, ಸದಸ್ಯರಾದ ಪ್ರಸನ್ನ ಭಟ್ ಪಂಚವಟಿ, ಕೆ.ಗಿರೀಶ್ ರೈ ಮಣಿಯ, ಯಂ. ರವಿ ಮಣಿಯ, ಪದ್ಮನಾಭ ಪೂಜಾರಿ ಬೆದ್ರಾಳ, ಮೋನಪ್ಪ ಪುರುಷ ಮುಗೇರಡ್ಕ, ಗಣೇಶ್ ಭಟ್ ಮಜಲುಮಾರು, ಗಣೇಶ್ ಶೆಟ್ಟಿ ಶಿಬರ ಅರ್ಚಕ ಪ್ರಸಾದ ಅಡಿಗ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ತಂತ್ರಿ, ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆ, ಸದಸ್ಯ ಶರತ್‌ಚಂದ್ರ ಬೈಪಾಡಿತ್ತಾಯ, ಉಮೇಶ್ ಇಂದಿರಾನಗರ, ವಿವಿಧ ಉಪ ಸಮಿತಿ ಪದಾಧಿಕಾರಿಗಳಾದ ಸುಧೀಂದ್ರ ತಂತ್ರಿ, ಸುರೇಶ್ ಪ್ರಭು, ರಮೇಶ್ ಮಾತೃಶ್ರೀ ಮುಕ್ವೆ, ಗಂಗಾಧರ ಆಚಾರ್ಯ, ಜಯಲಕ್ಷ್ಮೀ, ಶ್ರೀಕರಿ, ಶೋಭಾ, ನಿತ್ಯಾನಂದ ಆಚಾರ್ಯ, ಕೃಷ್ಣಪ್ಪ, ಗಣೇಶ್, ವಿಶ್ವನಾಥ ರೈ, ಸತೀಶ್, ಸುಂದರ ರೈ, ಶಿವಪ್ರಸಾದ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು