ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿನ ಓಂಕಾರ ಬಡಾವಣೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಯಾವುದೇ ಮೂಲಭೂತ ಸೌಕರ್ಯಗಳಾದ ರಸ್ತೆ ಡಾಮರೀಕರಣ, ನೀರು, ದಾರಿದೀಪ, ಚರಂಡಿ ವ್ಯವಸ್ಥೆ ಕಲ್ಪಿಸದ ಪಂಚಾಯತ್ ಹಾಗೂ ಸರ್ಕಾರದ ವಿರುದ್ಧ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಚುನಾವಣೆಯನ್ನು ಓಂಕಾರ ಬಡಾವಣೆಯ ಎಲ್ಲಾ ಮತದಾರರು ಬಹಿಷ್ಕರಿಸುವುದಾಗಿ ಬ್ಯಾನರ್ ಅಳವಡಿಸಲಾಗಿರುವುದು ಕಂಡು ಬಂದಿದೆ.