








ಪುತ್ತೂರು: ಪುತ್ತೂರಿನಲ್ಲಿ ಸುಮಾರು 30 ವರ್ಷಗಳ ಕಾಲ ದಸ್ತಾವೇಜು ಬರಹಗಾರರಾಗಿದ್ದ, ಪುತ್ತೂರು ಸೌಹಾರ್ದ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರೂ, ಹಾಲಿ ಅಧ್ಯಕ್ಷರೂ ಆಗಿರುವ ಇಚ್ಲಂಗೋಡು ಗುತ್ತು ಪಿ. ಅಕ್ಕರಿ ರೈಯವರ 70 ನೇ ವರ್ಷದ ಹುಟ್ಟುಹಬ್ಬ ಸಪ್ತತಿ ಸಂಭ್ರಮ ಹಾಗೂ ಪಿ. ಅಕ್ಕರಿ ರೈ ಮತ್ತು ಪರಾರಿಗುತ್ತು ವಿನೋದಾ ಎ. ರೈಯವರ ವೈವಾಹಿಕ ಜೀವನದ 40 ನೇ ವಾರ್ಷಿಕೋತ್ಸವದ ಸಲುವಾಗಿ ಗಣಪತಿ ಹವನ, ನವಗ್ರಹ ಶಾಂತಿ ಪೂರ್ವಕ ಭೀಮರಥಿ ಶಾಂತಿ ಹೋಮ, ನವಗ್ರಹ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ಜ. 17 ರಂದು ಕುದ್ರೆಡ್ಕ ಯಡಕ್ಕತ್ತೋಡಿ ‘ಶಿವಕೃಪಾ’ ಮನೆಯಲ್ಲಿ ನಡೆಯಿತು.





ಇದೇ ವೇಳೆ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಭೇಟಿ ನೀಡಿ ಶುಭಾಶಯ ಸಲ್ಲಿಸಿದರು.
ಪಿ. ಅಕ್ಕರಿ ರೈಯವರ ಸಹೋದರರಾದ ಕುಂಞಣ್ಣ ರೈ, ಪಿ. ವಾಸು ರೈ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ, ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ರೈ, ಪುತ್ರಿಯರಾದ ದಿವ್ಯಶ್ರೀ ಡಾ. ಜೀವನ್ ಪ್ರಕಾಶ್, ವಾಣಿಶ್ರೀ ಪ್ರವೀಣ್ ಚಂದ್ರ ಶೆಟ್ಟಿ ಹಾಗೂ ಪುತ್ರ ದಸ್ತಾವೇಜು ಬರಹಗಾರರಾಗಿರುವ ಸಚಿನ್ ಕುಮಾರ್ ರೈ, ಸೊಸೆ ಸ್ವಾತಿ ರೈ, ಮೊಮ್ಮಕ್ಕಳಾದ ಭೂಮಿಕಾ, ಪ್ರಜ್ವಲ್ ಶೆಟ್ಟಿ, ಭಾರ್ಗವ್ ಎಸ್. ರೈ ಮತ್ತು ಬೇಬಿ ಸಮೃದ್ದಿ, ಕುಟುಂಬಿಕರು, ಬಂಧು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದರು.

















