ಇಚ್ಲಂಪಾಡಿ: ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನ ಸುವರ್ಣ ಮಹೋತ್ಸವ, ಪುತ್ತೂರು ಧರ್ಮಪ್ರಾಂತ್ಯದ ವಾರ್ಷಿಕೋತ್ಸವ

0

* ಧರ್ಮಾಧ್ಯಕ್ಷರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ
* ಅಗಲಿದ ಧರ್ಮಾಧ್ಯಕ್ಷರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥನೆ
* ’ಕಾರುಣ್ಯ ನಿಧಿ’ ಚಾರಿಟಿ ಫಂಡ್‌ಗೆ ಚಾಲನೆ
* ಸ್ವ ಉದ್ಯೋಗಕ್ಕಾಗಿ ಆಟೋ ರಿಕ್ಷಾ ಹಸ್ತಾಂತರ

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನ ಸುವರ್ಣ ಮಹೋತ್ಸವ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ವಾರ್ಷಿಕೋತ್ಸವದ ಅಂಗವಾಗಿ ಜ.22ರಂದು ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ವಿವಿಧ ಕಾರ್ಯಕ್ರಮ ನಡೆಯಿತು.

ಧರ್ಮಾಧ್ಯಕ್ಷ ಡಾ| ಆಂಟನಿ ಮಾರ್ ಸಿಲ್ವಾನೊಸ್, ಡಾ.ಮ್ಯಾಥ್ಯು ಮಾರ್ ಪೊಳಿಕಾರ್ಪಸ್ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್‌ರವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ದಿವ್ಯಬಲಿ ಪೂಜೆ, ಅಗಲಿದ ಬಿಷಪ್ ಮೊರೋನ್ ಮಾರ್ ಸಿರಿಲ್ ಬಸೇಲಿಯೋಸ್ ಕಾಥೊಲಿಕೋಸ್, ಪುತ್ತೂರು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿದ್ದ ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್, ತಿರುವಲ್ಲ ಧರ್ಮ ಪ್ರಾಂತ್ಯದ ದ್ವಿತೀಯ ಧರ್ಮಾಧ್ಯಕ್ಷರಾಗಿದ್ದ ಡಾ| ಜೋಸೆಫ್ ಮಾರ್ ಸೇವೇರಿಯೋಸ್, ಫಾ| ಅಬ್ರಹಾಂ ಕಲಪ್ಪಾಟ್ ಅವರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥನೆ ಸಲ್ಲಿಸಲಾಯಿತು.

ಸಭಾ ಕಾರ್ಯಕ್ರಮ:

ಮಧ್ಯಾಹ್ನ ಚರ್ಚ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್‌ರವರು ಅಧ್ಯಕ್ಷತೆ ವಹಿಸಿದ್ದರು. ಧರ್ಮಾಧ್ಯಕ್ಷ ಡಾ| ಆಂಟನಿ ಮಾರ್ ಸಿಲ್ವಾನೊಸ್, ಡಾ.ಮ್ಯಾಥ್ಯು ಮಾರ್ ಪೊಳಿಕಾರ್ಪಸ್, ಸುಪಿರೀಯರ್ ಜನರಲ್ ರೆ.ಫಾ. ಮಥಾಯಿ ಕಡವಿಲ್ ರವರು ಶುಭಾಸಂಶನೆಗೈದರು. ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಅನಾರೋಗ್ಯಪೀಡಿತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಆರಂಭಿಸಿರುವ ಕಾರುಣ್ಯ ನಿಧಿಗೆ ಚಾಲನೆ ನೀಡಲಾಯಿತು. ಜಾಗ ಇಲ್ಲದ ಚರ್ಚ್‌ನ ಸದಸ್ಯರಿಗೆ ಜಾಗ ನೀಡುವ ಯೋಜನೆಗೂ ಚಾಲನೆ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಮಾರ್ ದಿವನ್ನಾಸಿಯೋಸ್ ಸ್ಮಾರಕ ಎಜುಕೇಷನಲ್ ಎಕ್ಸೆಲೆನ್ಸ್ ಅವಾರ್ಡ್ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸ್ಮರಣಿಕೆ, ಬಹುಮಾನ ನೀಡಲಾಯಿತು.

ಬಿಷಪ್ ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್, ಫಾ.ರೂಬೆಲ್, ಫಾ.ಸೆಬಾಸ್ಟಿನ್‌ರವರ ನಾಮಧಾರಿ ಸಂತರು ಸ್ಮರಣೆಯನ್ನು ಕೇಕ್ ಕಟ್ ಮಾಡಿ ಆಚರಿಸಲಾಯಿತು. ಎಂಸಿವೈಎಂ ಡಯಾಸಿಸ್‌ನ ವಾರ್ಷಿಕ ಕಾರ್ಯಕ್ರಮದ ಪಟ್ಟಿ, ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಎಂ.ಸಿ.ಎ. ಧರ್ಮಪ್ರಾಂತ್ಯ ಸಮಿತಿಯ ವತಿಯಿಂದ ಶಿವಮೊಗ್ಗ ವಲಯದ ಸದಸ್ಯರಾದ ಪತ್ರೋಸ್ ಸಿ.ಸಿ. ಅವರಿಗೆ ಸ್ವ ಉದ್ಯೋಗ ನೆರವಾಗಿ ಆಟೋ ರಿಕ್ಷಾ ನೀಡಲಾಯಿತು. ಫಾಮಿಲಿಯಾ ಬೈಬಲ್ ರಸಪ್ರಶ್ನೆ ವಿಜೇತರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಧರ್ಮಾಧ್ಯಕ್ಷರನ್ನು, ಚರ್ಚ್‌ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಧರ್ಮಗುರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಪುತ್ತೂರು ಧರ್ಮಪ್ರಾಂತ್ಯದ ಪಾಲನಾ ಸಮಿತಿ ಕಾರ್ಯದರ್ಶಿ ಯೋಹನ್ನಾನ್, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಜೋಸೆಫ್ ವಲಿಯಪರಂಬಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಾ. ಎಲ್ದೋ ಪುತ್ತನ್‌ಕಂಡತಿಲ್ ಸ್ವಾಗತಿಸಿದರು. ಚರ್ಚ್‌ನ ಧರ್ಮಗುರು ಫಾ.ಮೆಲ್ವಿನ್ ವಂದಿಸಿದರು. ಫಾ.ಜೈಸನ್ ಒಐಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಉಪಸ್ಥಿತರಿದ್ದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here