ಇಂದ್ರಪ್ರಸ್ಥದ ವಿಜ್ಞಾನ ಯೋಜನೆ ರಾಷ್ಟ್ರಮಟ್ಟಕ್ಕೆ

0

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ ಕಲ್ಬುರ್ಗಿಯ ಶ್ರೀ ಗುರು ವಿದ್ಯಾಪೀಠ ವಸತಿ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಪ್ರಾಜೆಕ್ಟ್ ರಾಷ್ಟ್ರಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದೆ.


ವಿದ್ಯಾರ್ಥಿಗಳಾದ ದೃಶ್ ಹಾಗೂ ಅಹಸನ್ ವದೂದ್ ಅವರುWidening of road margin – A threat to tree eco system. Is healthy community a myth ಎಂಬ ವಿಜ್ಞಾನ ಯೋಜನೆಯನ್ನು ತಯಾರಿಸಿದ್ದು, ಅದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಈ ಯೋಜನೆಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ನಿಶಿತಾ ಕೆ.ಕೆ. ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.


LEAVE A REPLY

Please enter your comment!
Please enter your name here