ಕಾಟನ್ ಸಿದ್ಧ ಉಡುಪುಗಳ ಖರೀದಿಗೆ ಸಕಾಲ-ಕಾಟನ್ ಕಿಂಗ್‌ನಲ್ಲಿದೆ 20% ಡಿಸ್ಕೌಂಟ್

0

ಪುತ್ತೂರು: ಪುರುಷರ ಕಾಟನ್ ಬಟ್ಟೆಗಳ ಸಿದ್ದ ಉಡುಪುಗಳ ತಯಾರಿಕೆಯಲ್ಲಿ ಸುಪ್ರಸಿದ್ದ ಸಂಸ್ಥೆಯಾಗಿರುವ, ಇಲ್ಲಿನ ಜಿ.ಎಲ್ ಕಾಂಪ್ಲೆಕ್ಸ್‌ನಲ್ಲಿರುವ `ಕಾಟನ್ ಕಿಂಗ್’ ಮಳಿಗೆಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ಆಕರ್ಷಕ ಶೇ.20ರಷ್ಟು ರಿಯಾಯಿತಿ ನೀಡುತ್ತಿದೆ.


ಭಾರತದಾದ್ಯಂತ 230 ಶೋರೂಮ್‌ಗಳನ್ನೊಳಗೊಂಡಿರುವ ಕಾಟನ್ ಕಿಂಗ್ ಮಳಿಗೆಯಲ್ಲಿ ಶುದ್ಧ ನೂರಕ್ಕೆ ನೂರು ಹತ್ತಿಯಿಂದಲೇ ತಯಾರಿಸಿದ ಪುರುಷರ ರೆಡಿಮೇಡ್ ಉಡುಪುಗಳು ಮಾತ್ರ ಮಳಿಗೆಯಲ್ಲಿ ಲಭ್ಯವಿದೆ. ಮಳಿಗೆಯು ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿರುವ ಸಂಸ್ಥೆಯಾಗಿದೆ. ಕಾಟನ್ ಬಟ್ಟೆಗಳ ಪುರುಷರ ಸಿದ್ದ ಉಡುಪುಗಳ ಎಕ್ಸ್‌ಕ್ಲೂಸಿವ್ ಮಳಿಗೆಯಾಗಿದೆ. ಮಳಿಗೆಯಲ್ಲಿ ಉತ್ತಮ ಗುಣಮಟ್ಟ ಹಾಗೂ ಮಿತ ಬೆಲೆಯಲ್ಲಿ ಸಿದ್ದ ಉಡುಪುಗಳು ಗ್ರಾಹಕರು ಖರೀದಿಸಬಹುದಾಗಿದೆ. ಪುರುಷರ ಪ್ಯಾಂಟ್, ಶರ್ಟ್, ಜೀನ್ಸ್, ಟೀ ಶರ್ಟ್‌ಗಳು ಕಲೆ ಉಳಿಯದಂತಹ ಬಟ್ಟೆಗಳು, ಬೇಸಿಗೆ ಬೆವರನ್ನು ಹಿಡಿದಿಟ್ಟುಕೊಳ್ಳುವ (ಬ್ರೀದ್ ಫ್ರೀ) ವಿವಿಧ ವಿನ್ಯಾಸದ ಬಟ್ಟೆಗಳು ಕಾಟನ್ ಕಿಂಗ್‌ನ ವಿಶೇಷತೆಯಾಗಿದೆ.

ಪ್ರತಿ ದಿನವೂ ಹೊಸ ಹೊಸ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿ ಉಡುಪುಗಳು, ಅತೀ ಕಡಿಮೆ ಬೆಲೆಗೆ ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಫುಲ ಅವಕಾಶವಿದೆ. ಯಾವುದೇ ಷರತ್ತುಗಳಿಲ್ಲದೆ ಎಲ್ಲಾ ರೀತಿಯ ಉಡುಪುಗಳ ಮೇಲೆ ಆಕರ್ಷಕ ರಿಯಾಯಿತಿ ನೀಡಲಾಗುತ್ತಿದ್ದು ಈ ಕೊಡುಗೆಯು ಫೆ.12ರ ತನಕ ಮಾತ್ರವೇ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here