ಜನನಿ ಫಾರ್ಮರ‍್ಸ್ ಪ್ರೋಡ್ಯೂಸರ್‌ನಿಂದ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರ

0

ಪುತ್ತೂರು:ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಇದರ ವತಿಯಿಂದ ಮಳೆಗಾಲದಲ್ಲಿ ಅಡಿಕೆ ಮತ್ತು ಮಿಶ್ರ ಬೆಳೆಗಳ ನಿರ್ವಹಣಾ ಮಾಹಿತಿ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರ ಹಾಗೂ ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡನೆ ಪ್ರಾತ್ಯಕ್ಷಿಕೆಯು ಎ.6ರಂದು ಕೃಷಿಕ ನರಿಮೊಗರು ಗ್ರಾಮದ ಮುಗೇರಡ್ಕ ಮೋನಪ್ಪ ಪುರುಷರವರ ತೋಟದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿದ ಉದ್ಘಾಟಿಸಿದ ಪ್ರಗತಿ ಪರ ಕೃಷಿಕ ಪಿ.ಕೆ.ಎಸ್ ಭಟ್ ಮಾತನಾಡಿ, ಕೃಷಿಕರು ರೈತ ಉತ್ಪಾದಕ ಸಂಸ್ಥೆಯ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯ ಆಡಳಿತ ನಿರ್ದೇಶಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಾಯ ಎಂಟರ್‌ಪ್ರೈಸಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ವಿವಿಧ ಕೃಷಿ ಯಂತ್ರೋಪಕರಣಗಳ ಲಭ್ಯತೆ ಹಾಗೂ ಕಂಪನಿಯು ರೈತರಿಗೆ ನೀಡುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಜನನ ಫಾರ್ಮರ್ ಪ್ರೊಡ್ಯುಸರ್ ಕಂಪನಿಯ ನಿರ್ದೇಶಕರಾದ ಮೋನಪ್ಪ ಪುರುಷ ಮುಗೇರಡ್ಕ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಪ್ರೀತ್ ಕುಮಾರ್ ಬಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಕುಲಾಲ್ ವಂದಿಸಿದರು. ನಿರ್ದೇಶಕರಾದ ಬಾಲಚಂದ್ರ ಗೌಡ ಕಡ್ಯ, ಲೀಲಾವತಿ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಯ ಎಂಟರ್‌ಪ್ರೈಸಸ್‌ನವರಿಂದ ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಹಾಗೂ ಔಷದಿ ಸಿಂಪಡನೆಯ ಪ್ರಾತ್ಯಕ್ಷಿಕೆ ನಡೆಯಿತು.

LEAVE A REPLY

Please enter your comment!
Please enter your name here