ಸಾಂದೀಪನಿ ವಿದ್ಯಾಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಂದ ಗೋಶಾಲೆಗೆ ಭೇಟಿ

0

 

 

ಪುತ್ತೂರು:  ಮಾ. 28ರಿಂದ 31ರವರೆಗೆ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರದ ಮೂರನೇ ದಿನದಂದು ಹಿಂದಾರು ಗೋಶಾಲೆಗೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಹಿಂದಾರು ಗೋಶಾಲೆಯ ಮಾಲಕ, ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ  ಭಾಸ್ಕರ ಆಚಾರ್ ಹಿಂದಾರುರವರು ಪ್ರತಿ ದಳಕ್ಕೆ ತಲಾ ಒಂದರಂತೆ ನಾಲ್ಕು ಹೆಣ್ಣು ಕರುಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು. ಎ.07ರಂದು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಕಬ್ ವಿಭಾಗದ ಜಿಷ್ಣು ಕುಮಾರ್, ಬುಲ್ ಬುಲ್ ವಿಭಾಗದ ಭೂಮಿಕಾ, ಸ್ಕೌಟ್ ವಿಭಾಗದ ತುಷಾರ್ ಹಾಗೂ ಗೈಡ್ ವಿಭಾಗದ ಅಪೇಕ್ಷಾ ಕೆ.ಪಿ.ಭಟ್ವ ಅವರಿಗೆ ವಿದ್ಯಾರ್ಥಿಗಳ ಹೆತ್ತವರ ಸಮಕ್ಷಮದಲ್ಲಿ ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರರವರು ಹೆಣ್ಣು ಕರುಗಳನ್ನು ನೀಡಿ ಶುಭ ಹಾರೈಸಿದರು. ಶಾಲಾ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಮುಖ್ಯೋಪಾಧ್ಯಾಯಿನಿ ಹಾಗೂ ಜಿಲ್ಲಾ ಗೈಡ್ಸ್ ಸಹ ಆಯುಕ್ತರಾದ ಜಯಮಾಲಾ.ವಿ.ಎನ್  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here