ಪುತ್ತೂರು: 31 ವರ್ಷಗಳ ಹಿಂದೆ ರಿಕ್ಷಾ ಚಾಲಕರೊಬ್ಬರಿಗೆ ಹಲ್ಲೆ ನಡೆಸಿ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು 5 ತಿಂಗಳ ಹಿಂದೆ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಯ್ಯನ್ನೂರು ತಾಲೂಕಿನ ಚೆರುಪುಝ ಪೊಲೀಸ್ ಠಾಣಾ ವ್ಯಾಪ್ತಿಯ ಪಾಡಿಚಾಲ್ ನಿವಾಸಿ ಸುಲೈಮಾನ್ ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿ.1990ರ ಸೆ.26ರಂದು ನಾರಾಯಣ ಗೌಡ ಎಂಬವರ ರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿದ್ದ ಸುಲೈಮಾನ್ ಮತ್ತು ಪದ್ಮ ನೆಲ್ಲಿಕಟ್ಟೆ ಎಂಬವರು ದಾರಂದಕುಕ್ಕು ಸಮೀಪ ರಿಕ್ಷಾ ಚಾಲಕ ನಾರಾಯಣ ಗೌಡ ಅವರಿಗೆ ಹಲ್ಲೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಾದ ಸುಲೈಮಾನ್ ಮತ್ತು ಪದ್ಮ ನೆಲ್ಲಿಕಟ್ಟೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಆರೋಪಿ ಸುಲೈಮಾನ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ಆತನ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ಆರೋಪಿಯು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಯ್ಯನ್ನೂರು ತಾಲೂಕಿನ ಚೆರುಪುಝ ಪೊಲೀಸ್ ಠಾಣಾ ವ್ಯಾಪ್ತಿಯ ಪಾಡಿಚಾಲ್ನಲ್ಲಿ ವಾಸವಾಗಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿ 5 ತಿಂಗಳ ಹಿಂದೆ ಆತನನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ನ್ಯಾಯಾಲಯವಿದೀಗ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿ ಪರ ವಕೀಲರಾದ ಕುಮಾರನಾಥ್ ಎಸ್ ವಾದಿಸಿದ್ದರು.