ಪುತ್ತೂರು ಜಾತ್ರೆಗೆ ಹಿಂದುಗಳ ರಿಕ್ಷಾಗಳಲ್ಲಿ ಕೇಸರಿ ಧ್ವಜ ಅಳವಡಿಸಿ ಹಿಂಜಾವೇಯಿಂದ ಭಗವಾಧ್ವಜ ಅಭಿಯಾನದಲ್ಲಿ ಡಾ.ಎಂ.ಕೆ.ಪ್ರಸಾದ್ ವಿನಂತಿ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ 2೦ರ ತನಕ ನಡೆಯುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಎಲ್ಲಾ ಹಿಂದು ಬಂಧುಗಳ ಅಟೋ ರಿಕ್ಷಾಗಳಲ್ಲಿ ಕೇಸರಿ ಧ್ವಜ ಅಳವಡಿಸುವಂತೆ ಹಿಂದು ಜಾಗರಣ ವೇದಿಕೆಯ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರು ವಿನಂತಿಸಿದ್ದಾರೆ.

             

ಪುತ್ತೂರು ಜಾತ್ರೋತ್ಸವದ ಸಂದರ್ಭದಲ್ಲಿ, ಭಗವಾಧ್ವಜ ಹಾಕಿರುವ ಆಟೋ ರಿಕ್ಷಾಗಳನ್ನೇ ಭಕ್ತಾದಿಗಳು ಬಳಸುವಂತೆ ಹಿಂದು ಜಾಗರಣ ವೇದಿಕೆ ವತಿಯಿಂದ ನಡೆಯುತ್ತಿರುವ ಅಭಿಯಾನಕ್ಕೆ ಸಂಬಂಧಿಸಿ ಎಪಿಎಂಸಿ ಆದರ್ಶ ಪಾರ್ಕ್‌ನಲ್ಲಿ ಆಟೋ ರಿಕ್ಷಾಗಳಿಗೆ ಸಾಂಕೇತಿಕವಾಗಿ ಕೇಸರಿ ಧ್ವಜ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನನಗೆ ರಿಕ್ಷಾದವರ ಮೇಲೆ ಬಹಳ ಪ್ರೀತಿ ಯಾಕೆಂದರೆ ಅನ್ಯಮತೀಯರು ನಮ್ಮ ಹಿಂದು ಹುಡುಗಿಯರನ್ನು ಲಪಟಾಯಿಸುವಾಗ ಜಾಗರಣ ವೇದಿಕೆಯ ನಮ್ಮ ಹುಡುಗರಿಗೆ ಮಾಹಿತಿ ನೀಡಿ ರಕ್ಷಣೆ ಮಾಡುತ್ತಿದ್ದಾರೆ. ಜಾಗರಣ ವೇದಿಕೆಯ ನೆಟ್‌ವರ್ಕ್‌ನಿಂದ ಬಹಳ ಪ್ರಯೋಜನ ಆಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಜಾತ್ರೆಯ ಸಂದರ್ಭದಲ್ಲಿ ಹಿಂದುಗಳು ತಮ್ಮ ಆಟೋ ರಿಕ್ಷಾದಲ್ಲಿ ಕೇಸರಿ ಧ್ವಜ ಅಳವಡಿಸಿ ಉತ್ತಮ ಬಾಡಿಗೆ ಮಾಡಿ ಎಂದವರು ಹೇಳಿದರು.

ಹಿಂದು ಉಳಿದರೆ ಮಾತ್ರ ಈ ದೇಶ ಉಳಿಯಲಿದೆ:

ತಪ್ಪು ದಾರಿಯಲ್ಲಿ ಹೋಗುವ ಹುಡುಗಿಯರನ್ನು ಪುನಃ ನಮ್ಮ ಧರ್ಮಕ್ಕೆ ಕರೆ ತರುವ ಕೆಲಸವನ್ನು ಎಲ್ಲರೂ ಪ್ರಶಂಸಿಸುತ್ತಾರೆ. ಆದರೆ ನಮ್ಮ ಸರಕಾರ ಇದ್ದರೂ ಸರಿಯಾದ ಸಹಕಾರ ಕೊಡುತ್ತಿಲ್ಲ.ನಮ್ಮ ಮೇಲೆ ಕೇಸು ಹಾಕುವ ಕೆಲಸ ಮಾಡುತ್ತಿದ್ದಾರೆ.ಈ ಕುರಿತು ಈಗಾಗಲೇ ಮೇಲಿನವರಿಗೆ ತಿಳಿಸಿದ್ದೇವೆ.ಮೊನ್ನೆ ನಡೆದ ಘಟನೆಯಲ್ಲಿ ಅಲ್ಲಿ ಯಾರಿಗೂ ಹೊಡೆದಿಲ್ಲ, ಬಡಿದಿಲ್ಲ.ಆದರೂ ಕೇಸು ಹಾಕಿದ್ದಾರೆ.ಮುಂದೆ ಹಿಂದು ಉಳಿದರೆ ಮಾತ್ರ ಈ ದೇಶ ಉಳಿಯುವುದು ಎಂಬುದನ್ನು ತಿಳಿದುಕೊಳ್ಳಿ ಎಂದು ಡಾ.ಎಂ.ಕೆ.ಪ್ರಸಾದ್ ಹೇಳಿದರು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಚಿನ್ಮಯ್ ರೈ ಈಶ್ವರಮಂಗಲ, ಅಜಿತ್ ರೈ ಹೊಸಮನೆ, ಅಶೋಕ್, ದಿನೇಶ್ ಪಂಜಿಗ, ಗಿತೀಶ್, ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here