ಪುತ್ತೂರು: ಗೋವಾ, ಹುಬ್ಬಳ್ಳಿ ಹಾಗೂ ಇತರೆಡೆಯ ಮಹಾನ್ ನಗರಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಪುತ್ತೂರಿನಲ್ಲಿ ಕೆಥೋಲಿಕ್ ಕ್ರಿಶ್ಚಿಯನ್ ಸಮುದಾಯದ `ದಿ ಕೆಟೆನಿಯನ್ಸ್ ಅಸೋಸಿಯೇಶನ್ ಪುತ್ತೂರು ಸರ್ಕಲ್ 380′ ಹೆಸರಿನಲ್ಲಿ ಮೂರು ವರ್ಷದ ಹಿಂದೆ ಆಸ್ತಿತ್ವಕ್ಕೆ ಬಂದಿದ್ದು ಇದರ ಮೂರನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಕುಟುಂಬ ಸಮ್ಮಿಲನವು ಫೆ.6ರಂದು ಆನೆಮಜಲಿನಲ್ಲಿನ ಸದಸ್ಯ ಲಾರೆನ್ಸ್ ಗೊನ್ಸಾಲ್ವಿಸ್ರವರ ಮನೆಯ ಪ್ರಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬನ್ನೂರು ಸಂತ ಅಂತೋನಿ ಚರ್ಚ್ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ರವರು ಮಾತನಾಡಿ, ಮನುಷ್ಯನಿಗೆ ನೆಮ್ಮದಿಯ ಜೀವನ ತನ್ನದಾಗಿಸಬೇಕಾದರೆ ಅಲ್ಲಿ ಪ್ರಶಾಂತತೆಯ ವಾತಾವರಣ, ಒಳ್ಳೆಯ ವ್ಯಕ್ತಿಗಳ ಸ್ನೇಹತ್ವದ ಜೊತೆಗೆ ಆತ್ಮೀಯತೆ ಇರಬೇಕಾಗುತ್ತದೆ ಜೊತೆಗೆ ಸಮಯವನ್ನು ಕಳೆಯಲು ಒಳ್ಳೆಯ ಸಂಘಟನೆಯೊಂದಿಗೆ ಬೆರೆತುಕೊಳ್ಳುವುದೂ ಮುಖ್ಯವೆನಿಸುತ್ತದೆ. ಇವೆಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಂಡಾಗ ಕುಟುಂಬದಲ್ಲಿನ ಬಾಂಧವ್ಯ, ಬಂಧುತ್ವ ವೃದ್ಧಿಯಾಗಬಲ್ಲುದು ಎಂದು ಹೇಳಿದರು.
ಈರ್ವರು ಸದಸ್ಯರ ಸೇರ್ಪಡೆ:
ಇತ್ತೀಚೆಗೆ ಕೆನರಾ ಬ್ಯಾಂಕಿನಲ್ಲಿ ಸೇವಾ ಕರ್ತವ್ಯದಿಂದ ನಿವೃತ್ತರಾದ ನಿವೃತ್ತ ಸೈನಿಕ ಜೆರೋಮ್ ಮಸ್ಕರೇನ್ಹಸ್ ಹಾಗೂ ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರಾದ ಮಿಂಗೆಲ್ ರೊನಾಲ್ಡ್ ಡೆಸಾರವರನ್ನು ದಿ ಕೆಟೆನಿಯನ್ಸ್ ಅಸೋಸಿಯೇಶನ್ನ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಅಧಿಕೃತವಾಗಿ ಸಂಸ್ಥೆಗೆ ಸೇರ್ಪಡೆಗೊಳಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಅಭಿನಂದನೆ:
ಜನ್ಮದಿನವನ್ನು ಆಚರಿಸುತ್ತಿರುವ ಸದಸ್ಯರಾದ ಜೋನ್ ರೆಬೆಲ್ಲೋ, ಲಾರೆನ್ಸ್ ಫೆರ್ನಾಂಡೀಸ್, ವಾಲ್ಟರ್ ಸಿಕ್ವೇರಾರವರಿಗೆ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ನ ಸಂತ ವಿನ್ಸೆಂಟ್ ದೇ ಪಾವ್ಲ್ ಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ವಾಲ್ಟರ್ ರೆಬೆಲ್ಲೋರವರಿಗೆ ಹೂ ನೀಡಿ ಅಭಿನಂದಿಸಲಾಯಿತು.
ದಿವ್ಯ ಬಲಿಪೂಜೆ:
ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ಅದೇ ದಿನ ಬೆಳಿಗ್ಗೆ ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ಸಂತ ಅಂತೋನಿ ಚರ್ಚ್ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.
ಕಾರ್ಯದರ್ಶಿ ವಾಲ್ಟರ್ ಫೆರ್ನಾಂಡೀಸ್ ವರದಿ ಹಾಗೂ ಕೋಶಾಧಿಕಾರಿ ಜೆರೋಮಿಯಸ್ ಪಾಸ್ ಲೆಕ್ಕಪತ್ರ ಮಂಡಿಸಿದರು. ಸದಸ್ಯರಾದ ಜೋನ್ ಕುಟಿನ್ಹಾ, ಜ್ಯೋ ಡಿ’ಸೋಜ, ಲಾರೆನ್ಸ್ ಗೊನ್ಸಾಲ್ವಿಸ್, ಡೆನ್ನಿಸ್ ಮಸ್ಕರೇನ್ಹಸ್, ಫೆಲಿಕ್ಸ್ ಡಿ’ಕುನ್ಹಾ, ಮಾರ್ಸೆಲ್ ವೇಗಸ್ ಬೆಳ್ಳಿಪ್ಪಾಡಿ, ಫ್ರೆಡ್ರಿಕ್ ಗೊನ್ಸಾಲ್ವಿಸ್, ಜೇಕಬ್ ಲಾರೆನ್ಸ್ ಲೋಬೋ, ಸಿರಿಲ್ ಮೊರಾಸ್, ವಿಲ್ಲಿ ಗಲ್ಬಾವೋ, ವಿಕ್ಟರ್ ಮಾರ್ಟಿಸ್, ಮೈಕಲ್ ಕ್ರಾಸ್ತಾ, ಜೆ.ಬಿ ಕುಲಾಸೊ ಮಡಂತ್ಯಾರುರವರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಅಸೋಸಿಯೇಶನ್ನ ಬಲವರ್ಧನೆಗೆ ಸಹಕರಿಸಿ..
ಅಸೋಸಿಯೇಶನ್ನಲ್ಲಿನ ಸರ್ವ ಸದಸ್ಯರು ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಬಹಳ ಪ್ರೋತ್ಸಾಹ ನೀಡುತ್ತಿದ್ದು, ಅಸೋಸಿಯೇಶನ್ನ ಬಲವರ್ಧನೆಗೆ ಸಹಕರಿಸುತ್ತಿದ್ದಾರೆ. ಸಮಾನ ಮನಸ್ಕ ಸದಸ್ಯರಿದ್ದರೆ ಸಂಘಟನೆಯು ಬೆಳೆಯಬಲ್ಲುದು ಎಂಬಂತೆ ನಮ್ಮ ಅಸೋಸಿಯೇಶನ್ನಲ್ಲಿ ಸಮಾನ ಮನಸ್ಕ ಚಿಂತನೆಯ ಸದಸ್ಯರಿದ್ದರಿಂದಲೇ ಸಂಸ್ಥೆಯು ಬೆಳೆಯುತ್ತಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಸಹಕಾರ ಮುಂದುವರೆಯಲಿ – ಪ್ರೊ|ಝೇವಿಯರ್ ಡಿ’ಸೋಜ, ಅಧ್ಯಕ್ಷರು, ದಿ ಕೆಟೆನಿಯನ್ಸ್ ಅಸೋಸಿಯೇಶನ್