ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ದೇವತಾ ಸಮಿತಿಯಿಂದ ಪುತ್ತೂರು ಜಾತ್ರಾ ಕಟ್ಟೆ ಪೂಜೆಯ ಸಂದರ್ಭ ಏರ್ಪಡಿಸಲಾಗಿದ್ದ ಅದೃಷ್ಟ ಕೂಪನ್ನಲ್ಲಿ ದ್ವಿಚಕ್ರ ವಾಹನಗಳ ವಿಜೇತರು ಮಾ.22ರಂದು ವಾಹನಗಳನ್ನು ಪಡೆದುಕೊಂಡಿದ್ದಾರೆ. ಪುತ್ತೂರು ಅಕ್ಷಯ ಮೋಟಾರ್ಸ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ನೂತನ ವಾಹನಗಳನ್ನು ಪಡೆದುಕೊಂಡರು.
ಅದೃಷ್ಟ ಚೀಟಿ ಏರ್ಪಡಿಸುವ ಸಂದರ್ಭ ಕೋವಿಡ್ ಲಾಕ್ಡೌನ್ ಬಂದಿತ್ತು. ಸುಳ್ಯ ಮೂಲದ ಉಮ್ಮರ್ ಮತ್ತು ಹೈಸನಾರ್ ಅವರು ಹೀರೋ ಗ್ಲಾಮರ್ ಬೈಕ್ ಮತ್ತು ಫ್ಲಝರ್ ಸ್ಕೂಟರನ ವಿಜೇತರಾಗಿದ್ದರು. ಆದರೆ ಅವರು ವಾಹನಗಳ ಮೇಲಿನ ತೆರಿಗೆ ಹಣ ಪಾವತಿ ಮಾಡಬೇಕಾಗುವುದರಿಂದ ಅವರಿಗೆ ವಾಹನಗಳನ್ನು ಪಡೆಯಲು ತಡವಾಗಿತ್ತು. ವಿಜೇತರಿಗೆ ದ್ವಿಚಕ್ರ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರ ಲೋಕೇಶ್ ಬನ್ನೂರು ಮತ್ತು ಕನ್ನಡಪ್ರಭ ಪತ್ರಿಕೆ ವರದಿಗಾರ ಸಂಶುದ್ದೀನ್ ಸಂಪ್ಯ ಹಾಗೂ ಕೆ.ಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರು ವಿಜೇತರಿಗೆ ಕೀ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ದೇವತಾ ಸಮಿತಿ ಅಧ್ಯಕ್ಷ ಲೋಕೇಶ್ವರ ಪಿ, ಕಾರ್ಯದರ್ಶಿ ಶಾಂತಾರಾಮ ವಿಟ್ಲ, ಅಕ್ಷಯ ಮೋಟಾರ್ಸ್ನ ಪಾಲುದಾರರಾದ ಶಿವಪ್ರಸಾದ್ ಮತ್ತು ಕೃಷ್ಣ ಕುಮಾರ್, ಕೆಎಸ್ಸಾರ್ಟಿಸಿ ದೇವತಾ ಸಮಿತಿಯ ಹರೀಶ್ಚಂದ್ರ, ಕೆಎಸ್ಸಾರ್ಟಿಸಿ ಸಹಾಯಕ ಸಂಚಾರ ಅಧೀಕ್ಷಕ ಭಾಸ್ಕರ್ ತೊಕ್ಕೊಟ್ಟು, ಸತೀಶ್ ಕುಮಾರ್, ನಿತೀಶ್ ಕುಮಾರ್, ಚಾಲಕ ಅಕ್ಷತ್ ಮತ್ತಿತರರು ಉಪಸ್ಥಿತರಿದ್ದರು.