ಅದ್ಯಕ್ಷರಾಗಿ ಹರೀಶ್ ಗೌಡ ಕರೆಜ್ಜ, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪಾವತಿ ಆನಂದ ಗೌಡ ಆಯ್ಕೆ
ಕುರಿಯ:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಒಕ್ಕಲಿಗ ಸ್ವ ಸಹಾಯ ಗುಂಪುಗಳ ಒಕ್ಕೂಟ ಕುರಿಯ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಜ 30 ರಂದು ಕುರಿಯ ಉಳ್ಳಾಲ ಮಹಾವಿಷ್ಣುಮೂರ್ತಿ ದೇವಾಲಯದ ಸಭಾಭವನದಲ್ಲಿದಲ್ಲಿ ನಡೆಯಿತು, ಒಕ್ಕೂಟದ ನೂತನ ಅಧ್ಯಕ್ಷರಾಗಿ ಹರೀಶ್ ಗೌಡ ಕರೆಜ್ಜ ಪ್ರಧಾನ ಕಾರ್ಯದರ್ಶಿ ಯಾಗಿ ಪುಷ್ಪಾವತಿ ಆನಂದ ಗೌಡ ನೈತಾಡಿ, ಉಪಾಧ್ಯಕ್ಷರಾಗಿ ಚಂದ್ರ ಎಸ್ ಸಂಪ್ಯ ಬೈಲಾಡಿ, ಜೊತೆ ಕಾರ್ಯದರ್ಶಿಯಾಗಿ ಭರತ್ ಕೋಶಾಧಿಕಾರಿಯಾಗಿ ರೋಹಿತ್ ಗೌಡ ಗಡಾಜೆ ಇವರನ್ನು ಆಯ್ಕೆಗೊಳಿಸಲಾಯಿತು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಎ ವಿ ನಾರಾಯಣ ನೂತನ ಪದಾಧಿಕಾರಿಗಲಿಗೆ ಅಭಿನಂದನೆ ತಿಳಿಸಿ ಸ್ವ ಸಹಾಯ ಸಂಘಗಳ ಮೂಲಕ ವ್ಯವಹಾರ ನಡೆಸಿ ಪ್ರತಿಯೋರ್ವರು ಆರ್ಥಿಕವಾಗಿ ಸದೃಢಗೊಂಡು ಸ್ವಾವಲಂಬಿಗಳಾಗಿ ಸ್ವಾಭಿಮಾನ ದಿಂದ ಜೀವನ ನಡೆಸುವಂತಾಗಬೇಕು,ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿ, ಸಮಾಜವನ್ನು ಒಗ್ಗೂಡಿಸುವಂತೆ ಒಕ್ಕೂಟ ಕಾರ್ಯನಿರ್ವಹಿಸಬೇಕು ಎಂದರು, ಟ್ರಸ್ಟ್ ನ ಮೇಲ್ವಿಚಾರಕ ವಿಜಯಕುಮಾರ್ ಒಕ್ಕೂಟದ ಕಾರ್ಯಸೂಚಿಯ ಬಗ್ಗೆ ವಿವರಿಸಿದರು.
ನಿಕಟಪೂರ್ವ ಅಧ್ಯಕ್ಷ ನಾರಾಯಣ ಗೌಡ ಕೈಂತಿಲ ಹಾಗೂ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಚಿದಾನಂದ ಗೌಡ ಬೂಡಿಯರು ಮಾತನಾಡಿ ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲ ಸದಸ್ಯರಿಗೂ ಕ್ರತಜ್ಞತೆ ಸಲ್ಲಿಸಿದರು ನೂತನ ಅಧ್ಯಕ್ಷ ಹರೀಶ್ ಗೌಡ ಕರೆಜ್ಜ ಎಲ್ಲಾ ಸದಸ್ಯರುಗಳು ಸಹಕಾರ ನೀಡುವಂತೆ ವಿನಂತಿಸಿದರು.
ಅಧಿಕಾರ ಹಸ್ತಾಂತರ: ಹಿಂದಿನ ಅವಧಿಯ ಪದಾಧಿಕಾರಿಳಾದ ನಾರಾಯಣ ಗೌಡ ಕೈಂತಿಲ, ಚಿದಾನಂದ ಗೌಡ ಬೂಡಿಯರು,ಗುಡ್ಡಪ್ಪ ಗೌಡ ಸಂಪ್ಯ ಬೈಲಾಡಿ ನೂತನ ಪದಾಧಿಕಾರಿಗಳಿಗೆ ಒಕ್ಕೂಟ ನಿರ್ಣಯ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಕಾರ್ಯಕ್ರಮ ದಲ್ಲಿ ಸ್ವ ಸಹಾಯ ಸಂಘಗಳ ಪ್ರಬಂಧಕ ಮತ್ತು ಸಯೋಜಕರು ಗಳು ಸದಸ್ಯರು ಉಪಸ್ಥಿತರಿದ್ದರು. ಹರೀಶ್ ಗೌಡ ಸ್ವಾಗತಿಸಿದರು, ಶ್ರೀಕಾಂತ್ ಗೌಡ ಕಾರ್ಯಕ್ರಮ ನಿರ್ವಹಿಸಿದರು,ಪುಷ್ಪಾವತಿ ಅನಂದಗೌಡ ನೈತಾಡಿ ಪ್ರಾರ್ಥಿಸಿ, ವಂದಿಸಿದರು.