ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಫೆ.15 ರಂದು ಬೆಳಿಗ್ಗೆ ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಲಿದ್ದಾರೆ.
ಗ್ರಾಮಸಭೆಯ ಪ್ರಯುಕ್ತ ವಾರ್ಡ್ ಸಭೆಯು ಇಂದಿನಿಂದ ನಡೆಯಲಿದ್ದು ವಾರ್ಡ್ 3 ಮತ್ತು ವಾರ್ಡ್ 4 ರ ವಾರ್ಡ್ ಸಭೆಯು ಫೆ.04 ರಂದು ನಡೆಯಲಿದ್ದು ವಾರ್ಡ್ 2 ರ ಸಭೆಯು ಬೆಳಿಗ್ಗೆ 11 ಗಂಟೆಗೆ ದರ್ಬೆತ್ತಡ್ಕ ಸ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಾರ್ಡ್ ಸಂಖ್ಯೆ 4 ರ ಸಭೆಯು ವನಿತಾ ಕುಮಾರಿಯರವರ ಅಧ್ಯಕ್ಷತೆಯಲ್ಲಿ ಅಪರಾಹ್ನ 2.30 ಕ್ಕೆ ಅಜ್ಜಿಕಲ್ಲು ಸ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ವಾರ್ಡ್ 1 ರ ಸಭೆಯು ಸುಂದರಿಯವರ ಅಧ್ಯಕ್ಷತೆಯಲ್ಲಿ ಫೆ.8 ರಂದು ಬೆಳಿಗ್ಗೆ 11 ಕ್ಕೆ ಗ್ರಾಪಂ ಸಭಾಂಗಣದಲ್ಲಿ ನಡೆಯಲಿದ್ದು, ವಾರ್ಡ್ ಸಂಖ್ಯೆ 2 ರ ಸಭೆಯು ಬಿ.ಸಿ ಚಿತ್ರರವರ ಅಧ್ಯಕ್ಷತೆಯಲ್ಲಿ ಫೆ.7 ರಂದು ಬೆಳಿಗ್ಗೆ ಕುಟ್ಟಿನೋಪಿನಡ್ಕ ಸ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ವಾರ್ಡ್ ಸಭೆ ಮತ್ತು ಗ್ರಾಮಸಭೆಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆ ಹಾಗೂ ಸರಕಾರದ ಸವಲತ್ತು ಪಡೆಯಲು ಅರ್ಜಿ ಸಲ್ಲಿಸುವಂತೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್, ಕಾರ್ಯದರ್ಶಿ ಜಯಂತಿ ಹಾಗೂ ಸರ್ವ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದ ಪ್ರಕಟಣೆ ತಿಳಿಸಿದೆ.