ಪುತ್ತೂರು: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ (ಜಿಸ್ತಿಯಾ) ಇದರ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆ ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ವಾರ್ಷಿಕ ವರದಿ ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲ ಪಟ್ಟೆ (ಪುತ್ತುಚ್ಚ) ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ದರ್ಬೆ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮಹಮ್ಮದ್ ಕುಂಞಿ(ಅಮ್ಮಿ) ಪಟ್ಟೆ, ಕಾರ್ಯದರ್ಶಿಯಾಗಿ ಇಬ್ರಾಹಿಂ ಹಾಜಿ ದರ್ಬೆ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ದರ್ಬೆ, ಶಕೀಲ್ ಅಹ್ಮದ್ ಬೇರಿಕೆ, ಸಯೀದ್ ತೋಟ, ಹಾರಿಸ್ ಬೋಳೋಡಿ, ಹಾರಿಸ್ ತ್ಯಾಗರಾಜೆ, ಲತೀಫ್ ಅಂಙತ್ತಡ್ಕ, ಇಸ್ಮಾಯಿಲ್ ಪೆರ್ಲ, ಲತೀಫ್ ಆದ್ರೋಡಿ, ರಶೀದ್ ತ್ಯಾಗರಾಜೆ ಆಯ್ಕೆಗೊಂಡರು.