ಪುತ್ತೂರು: ಉಜಿರೆಯಲ್ಲಿ ನಡೆದ ದ.ಕ.ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಮೊದಲ ದಿನ ಶುಕ್ರವಾರ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ಕಲಾ ತಂಡದಿಂದ ‘ನೃತ್ಯೋಹಂ’ ಭರತನಾಟ್ಯ ಸಮೂಹ ನೃತ್ಯ ಪ್ರದರ್ಶನ ನಡೆಯಿತು. ನೃತ್ಯಕೇಂದ್ರದ ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ನೃತ್ಯ
ನಿರ್ದೇಶನದಲ್ಲಿ ಕಲಾ ತಂಡದ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಿದರು.
ನೃತ್ಯತಂಡದ ಕಲಾವಿದರಾದ ನಿಖಿತಾ ಎ.ಎಂ, ಸಿಂಚನಾ ಪಿ.ಎಸ್, ಶ್ರೀಕೃಪಾ ನೇರಳಕಟ್ಟೆ, ವೈಷ್ಣವಿ, ಭುವಿ, ಮಂಗಳದುರ್ಗ, ಅಂಕಿತ, ಹಂಸಾನಂದಿ, ಭಾರತಿ ಕಡಬ, ಶ್ರದ್ಧಾ-ಶ್ರಾವ್ಯ ಉಪ್ಪಿನಂಗಡಿ, ಪ್ರಣತಿ ಪುತ್ತೂರು, ತನ್ವಿ ಉಪ್ಪಿನಂಗಡಿ, ಸಿಂಚನಾ ಎಸ್.ಭಟ್, ಶೃತಿರಂಜನಿ, ತೇಜಸ್ವಿರಾಜ್ ಕಡಬ, ನಿಹಾರಿಕಾ, ಪೃಥ್ವಿ ಪುಣಚ, ಫಲ್ಗುಣಿ ವಿಟ್ಲ ಇವರು ನೃತ್ಯ ಪ್ರದರ್ಶನ ನೀಡಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಡಾ.ಶ್ರೀಧರ ಭಟ್ ಉಜಿರೆ ಇವರು ಕಲಾತಂಡಕ್ಕೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.