ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಭಾರತೀಯ ಜೀವವಿಮಾ ನಿಗಮ ಬಿ.ಸಿ. ರೋಡು ಶಾಖೆ ಇದರ ಗೋಲ್ಡನ್ ಜುಬ್ಲಿ ಫೌಂಡೇಶನ್ – ಸ್ಟೂಡೆಂಟ್ ಆಫ್ ದ ಇಯರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶಾಲಾ ಸಭಾಭವನಸಲ್ಲಿ ನಡೆಯಿತು.
ಭಾರತೀಯ ಜೀವ ವಿಮಾ ನಿಗಮ ಬಿ.ಸಿ.ರೋಡು ಶಾಖೆಯ ಸಹಾಯಕ ವ್ಯವಸ್ಥಾಪಕರಾದ ಕೃಪಾಲ್ ಬಿ ಎಚ್ ಇವರು ಮಾತನಾಡಿ ಭಾರತೀಯ ಜೀವ ವಿಮಾ ನಿಗಮದ ಮೂಲಕ ವಿವಿಧ ಯೋಜನೆಗಳನ್ನು ಕೈಗೊಳ್ಳಲು ನಮಗೆ ದೊರಕುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ವಿದ್ಯಾಸಂಸ್ಥೆಗಳಿಗೆ ಲಭ್ಯವಿರುವ ಅನುಕೂಲತೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಈ ನಿಗಮದ ಮೂಲಕ ದೊರಕುವ ವಿದ್ಯಾರ್ಥಿವೇತನದ ಬಗ್ಗೆಯೂ ಮಾಹಿತಿ ನೀಡಿದರು.
ಶಾಲಾ ಆಡಳಿತ ಅಧಿಕಾರಿ ರವೀಂದ್ರ ಡಿ ರವರು ಜೀವ ವಿಮಾ ನಿಗಮದ ಸೌಲಭ್ಯದ ಮಹತ್ವದ ಬಗ್ಗೆ ವಿವರಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕ ಪ್ರಹ್ಲಾದ್. ಜೆ ಶೆಟ್ಟಿ, ಜೀವ ವಿಮಾ ನಿಗಮ ಬಿ.ಸಿ.ರೋಡು ಶಾಖೆ ಯ ಮುಖ್ಯ ಸಲಹೆಗಾರ ಉಮೇಶ್ ಪಿ., ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಶಾಲಾ ಶಿಕ್ಷಕಿ ಹಂಸವೇಣಿ ಪ್ರಾರ್ಥಿಸಿ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ವಂದಿಸಿದರು. ಶಿಕ್ಷಕಿ ಶಿಕ್ಷಾ ಶೆಟ್ಟಿ ಪುರಸ್ಕೃತ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು. ಶಿಕ್ಷಕಿ ಯಜ್ಞೇಶ್ವರಿ ಎನ್ ಕಾರ್ಯಕ್ರಮ ನಿರೂಪಿಸಿದರು.