ವಿಟ್ಲ: ಕಳೆದ 34ವರ್ಷಗಳಿಂದ ವಿಟ್ಲದ ಸೈಂಟ್ ರೀಟಾ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಲೀನಾ ವೇಗಸ್ ರವರನ್ನು ಶಾಲಾ ವತಿಯಿಂದ ಬೀಳ್ಕೊಡಲಾಯಿತು.
ಸಂತರೀಟಾ ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ ಫಾ. ಐವನ್ ಮೈಕಲ್ ರೊಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಿಜಯ್ ಪಾಯ್ಸ್, ಕಾರ್ಯದರ್ಶಿ ತೋಮಸ್ ಡಿಸೋಜ, ಶಾಲಾ ಸುರಕ್ಷಾ ಸಮಿತಿ ಸದಸ್ಯರಾದ ಷರೀಫ್,ಆಡಳಿತ ಮಂಡಳಿ ಸದಸ್ಯರಾದ ಚಾಲ್ಸ್ ಸಿಕ್ವೇರಾ,ವಿಟ್ಲ ಸಂತ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕರಾದ ಫಾ. ಸುನಿಲ್ ಪ್ರವೀಣ್ ಪಿಂಟೊ, ಸುರಕ್ಷಾಸಮಿತಿ ಮಾಜಿ ಗೌರವಸಲಹೆಗಾರ ಸುದರ್ಶನ್ ಪಡಿಯಾರ್, ಸಂತ ರೀಟಾ ಕನ್ನಡಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಸಿಸ್ಟರ್ ಜಾನೆಟ್ ಡಿಸೋಜಾ, ಸಂತರೀಟಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಸಿಸ್ಟರ್ ಮರೀನಾ, ಎವೆರಸ್ಟ್ ಲೋಬೊ, ಎವಿಟಾ ಪತಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕರಾದ ಸಿ. ಜಾನೆಟ್ ಡಿಸೋಜಾ ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಶಿಕ್ಷಕಿಯ ಬಗ್ಗೆ ಶಿಕ್ಷಕಿ ಮಲ್ಲಿಕಾ, ವಿದ್ಯಾರ್ಥಿ ಕೆ. ಶಮ ಅನಿಸಿಕೆ ವ್ಯಕ್ತಪಡಿಸಿದರು.
ಚುಕ್ರ ಎ. ವಂದಿಸಿದರು. ಸಹಶಿಕ್ಷಕ ಸಿ ಜಯರಾಮಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.