ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.3ಮತ್ತು 4ರಂದು ನಡೆಯಿತು. ಫೆ.3ರಂದು ಬೆಳಿಗ್ಗೆ ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಹಾಗೂ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪುತ್ತೂರು ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಫೆ.4 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀವರ ಬಲಿ ಉತ್ಸವ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ದೇವರ ಬಲಿ ಒಳಗಾಗಿ ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಜರಗಿತು. ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಕೆಮ್ಮಾಯಿ ಶ್ರೀಮಹಾವಿಷ್ಣು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ದೈವದ ಭಂಡಾರ ತೆಗೆದು ಪಿಲಿಭೂತ, ದೈವದ ನೇಮ ನಡಾವಳಿ ನಡೆಯಿತು. ಜಾತ್ರೆಯಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ವತಿಯಿಂದ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಅನ್ನದಾನ ಸೇವೆ:
ಸಾಯಿಲಕ್ಷ್ಮಿ ಅಡ್ಲಿಮಜಲು ರಾಜು ಶೆಟ್ಟಿ ಚಿಕ್ಕಮುಡ್ನೂರು ಮತ್ತು ಎಚ್.ಬಾಬು ಶ್ರೀಕೃಷ್ಣ ನಿಲಯ ಕಲ್ಲಾರೆ ಇವರು ಒಂದು ದಿನದ ಅನ್ನದಾನ ಸೇವೆ ಹಾಗೂ ಸಿಹಿತಿಂಡಿ ಪ್ರಾಯೋಜಕತ್ವ ವಹಿಸಿಕೊಂಡಿದ್ದರು.
ಸಹಕಾರ:
ಜಾತ್ರಾ ಮಹೋತ್ಸವಕ್ಕೆ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಕೆಮ್ಮಾಯಿ, ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಕೆಮ್ಮಾಯಿ, ಶ್ರೀವಿಷ್ಣು ಯುವಕ ಮಂಡಲ ಕೆಮ್ಮಾಯಿ, ಶ್ರೀ ಕ್ಷೇ.ಧ.ಗ್ರಾ.ಯೋ. ಚಿಕ್ಕಮುಡ್ನೂರು, ಸ್ವ-ಸಹಾಯ ಸಂಘ-ಸಂಸ್ಥೆಗಳು, ಶ್ರೀ ಮಹಾವಿಷ್ಣುಮೂರ್ತಿ ಯುವಕ ಮಂಡಲ ದಾರಂದಕುಕ್ಕು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕೃಷ್ಣನಗರ, ಮೊಸರು ಕುಡಿಕೆ ಸಮಿತಿ ಕೆಮ್ಮಾಯಿ, ಕಲಿಯುಗ ಸೇವಾ ಸಮಿತಿ ಚಿಕ್ಕಮುಡ್ನೂರು, ಶಿವಶಕ್ತಿ ಯುವಕ ಮಂಡಲ ಕೃಷ್ಣನಗರ, ಒಕ್ಕಲಿಗ ಸ್ವ- ಸಹಾಯ ಸಂಘಗಳು ಚಿಕ್ಕಮುಡ್ನೂರುರವರು ಸಹಕಾರ ನೀಡಿದ್ದರು. ಆಂಜನೇಯ ಸೌಂಡ್ಸ್ನ ಬೊಳುವಾರು ಮಧುರವರಿಂದ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಆಡಳಿತ ಮೊಕ್ತೇಸರ
ಶ್ರೀಪತಿ ಬೈಪಾಡಿತ್ತಾಯ, ಗೌರವಾಧ್ಯಕ್ಷ ಡಾ. ಅಶೋಕ್ ಪಡಿವಾಳ್ ಮೂಡಾಯೂರುಗುತ್ತು, ಶ್ರೀಧರ ಬೈಪಾಡಿತ್ತಾಯ, ದೇವಸ್ಥಾನದ ಅರ್ಚಕ ವೃಂದ, ಅಧ್ಯಕ್ಷರು, ಸದಸ್ಯರು, ಬೈಪಾಡಿತ್ತಾಯ ಕುಟುಂಬಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರ ಕೃಪೆ :ವಿಷ್ಣು ಸ್ಟುಡಿಯೋ