ತೆಗ್ಗು ಹಾಲು ಉತ್ಪಾದಕರ ಸಂಘದಲ್ಲಿ ಸ್ವಯಂಚಾಲಿತ ಗಣಕಯಂತ್ರ ಉದ್ಘಾಟನೆ, ಮಾಹಿತಿ, ಸನ್ಮಾನ

0

ಒಕ್ಕೂಟದಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸದಾ ಸಿದ್ಧ: ಜಯರಾಮ ರೈ

ಪುತ್ತೂರು: ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಮತ್ತು ಬೆಳವಣಿಗೆಗೆ ಜಿಲ್ಲಾ ಹಾಲು ಒಕ್ಕೂಟದಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸದಾ ಸಿದ್ಧರಿದ್ದೇವೆ. ಒಕ್ಕೂಟದಡಿಯಲ್ಲಿ ಸುಮಾರು 737 ಸಂಘಗಳಿವೆ. ಅದರಲ್ಲಿ 204 ಮಹಿಳಾ ಸಂಘಗಳಿವೆ. ಸುಮಾರು 4 ಲಕ್ಷದ 60 ಸಾವಿರ ಲೀಟರ್ ಹಾಲು ಬರುತ್ತಾ ಇದೆ. ಸುಮಾರು 50 ಸಾವಿರ ಲೀಟರ್ ಹಾಲಿನ ಕೊರತೆ ಇದೆ. ಕೊರೋನದ ಸಮಯದಲ್ಲಿ ಒಕ್ಕೂಟಕ್ಕೆ ನಷ್ಟ ಬರುವ ಹಾಗಾಯಿತು. ಅದೇನಿದ್ದರೂ ಒಕ್ಕೂಟದಿಂದ ಸಂಘಗಳಿಗೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಲೇ ಬಂದಿದ್ದೇವೆ ಮುಂದೆಯೂ ಮಾಡುತ್ತೇವೆ ಎಂದು ದ.ಕ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಹೇಳಿದರು.

ಅವರು ಫೆ.07 ರಂದು ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ವಯಂಚಾಲಿತ ಗಣಕಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ದ.ಕ ಜಿಲ್ಲೆ ಸೇರಿದಾಗ ಸುಮಾರು 50 ಸಾವಿರ ಲೀಟರ್ ಹಾಲು ಕಡಿಮೆ ಇದೆ. ಈ ಹಾಲನ್ನು ಹೊರಗಿನಿಂದ ತರಲು ಕಷ್ಟವಾಗುತ್ತಿದೆ. ಆದ್ದರಿಂದ ಒಕ್ಕೂಟಕ್ಕೂ ನಷ್ಟ ಆಗುವ ಛಾನ್ಸ್ ಇದೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚು ಹಾಲನ್ನು ಸಂಘಗಳು ನೀಡಿದ್ದಲ್ಲಿ ಒಕ್ಕೂಟದ ಅಭಿವೃದ್ಧಿಯೊಂದಿಗೆ ಸಂಘಗಳ ಅಭಿವೃದ್ಧಿಯು ಸಾಧ್ಯ ಎಂದ ಜಯರಾಮ ರೈಯವರು ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘ ಮುಂದಿನ ದಿನಗಳನ್ನು ಇನ್ನಷ್ಟು ಹೆಚ್ಚು ಹಾಲನ್ನು ಸಂಗ್ರಹಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ದ.ಕ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್‌ರವರು ಮಾತನಾಡಿ, ಸ್ವಯಂ ಚಾಲಿತ ಗಣಕಯಂತ್ರದ ಉದ್ಘಾಟನೆಯೊಂದಿಗೆ ಒಂದು ಪಾರದರ್ಶಕ ವ್ಯವಸ್ಥೆಯನ್ನು ಸಂಘಕ್ಕೆ ನೀಡಲಾಗಿದೆ. ಪೆನ್ನು ಪುಸ್ತಕದಲ್ಲಿ ಬರೆದಿಡುವ ಬದಲು ಕಂಪ್ಯೂಟರ್‌ನಲ್ಲಿ ದಾಖಲಾಗುವ ಎಲ್ಲಾ ಡಾಟಗಳನ್ನು ಸುಲಭದಲ್ಲಿ ಹುಡುಕಬಹುದು ಮತ್ತು ಅವುಗಳ ಪಾರದರ್ಶಕವಾಗಿರುತ್ತವೆ ಎಂದರು. ಇಂತಹ ಸ್ವಯಂಚಾಲಿತ ಗಣಕಯಂತ್ರಗಳು ಎಲ್ಲಾ 737 ಸಂಘಗಳಲ್ಲೂ ಆಗಬೇಕು ಎಂಬ ಉದ್ದೇಶದೊಂದಿಗೆ ಒಕ್ಕೂಟವು ಸುಮಾರು 1 ಲಕ್ಷದ 90 ಸಾವಿರದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.‌ ಇದರಲ್ಲಿ 90 ಸಾವಿರ ಸಬ್ಸಿಡಿ ಆಗಿರುತ್ತದೆ. ಸಮಾಜದ ಬದಲಾವಣೆಯೊಂದಿಗೆ ನಾವು ಕೂಡ ಹೆಜ್ಜೆ ಹಾಕಬೇಕಾದ ಅಗತ್ಯತೆ ಇದೆ. ತೆಗ್ಗು ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.

ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶುಭಪ್ರಕಾಶ್ ಎರಬೈಲು ಸಭಾಧ್ಯಕ್ಷತೆ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ರಾಮಕೃಷ್ಣ ರೈ ಬೂಡಿಯಾರ್, ನಿರ್ದೇಶಕರುಗಳಾದ ಬಾಳಪ್ಪ ಗೌಡ, ಹರಿಕೃಷ್ಣ ಜೆ, ಗಂಗಾಧರ ಗೌಡ, ಸಂಜೀವ ಆಳ್ವ, ಲೀಲಾವತಿ ರೈ ಉಪಸ್ಥಿತರಿದ್ದರು. ಸಂಘದ ಹಾಲು ಪರೀಕ್ಷಕಿ ಸುವಾಸಿನಿ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಅರ್ಪಣಾ ಸ್ವಾಗತಿಸಿ, ಉಪಾಧ್ಯಕ್ಷ ರಮಾನಾಥ ರೈ ಕೋಡಂಬು ವಂದಿಸಿದರು. ನಿರ್ದೇಶಕ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ/ಹೈನುಗಾರಿಕೆ ಮಾಹಿತಿ ಶಿಬಿರ
ದ.ಕ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಮತ್ತು ನಿರ್ದೇಶಕ ನಾರಾಯಣ ಪ್ರಕಾಶ್‌ರವರಿಗೆ ಈ ಸಂದರ್ಭದಲ್ಲಿ ಶಾಲು, ಪೇಟಾ, ಹಾರ, ಸ್ಮರಣಿಕೆ, ಫಲಪುಷ್ಪಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಹೈನುಗಾರಿಕೆಯ ಬಗ್ಗೆ ದನಗಳಿಗೆ ಕಾಡುತ್ತಿರುವ ಚರ್ಮಗಂಟು ರೋಗದ ಬಗ್ಗೆ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಸತೀಶ್ ಮತ್ತು ವಿಸ್ತರಣಾಧಿಕಾರಿ ಕೆ.ನಾಗೇಶ್‌ರವರು ಮಾಹಿತಿ ನೀಡಿದರು.

‘ಸಂಘಕ್ಕೆ ಸ್ವಯಂಚಾಲಿತ ಗಣಕ ಯಂತ್ರದ ಅವಶ್ಯಕತೆ ಇದೆ ಎಂದು ಒಕ್ಕೂಟಕ್ಕೆ ಮನವಿ ಮಾಡಿದ ಕೂಡಲೇ ಶೀಘ್ರ ಸ್ಪಂದನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಒಕ್ಕೂಟಕ್ಕೆ ಮತ್ತು ಸಂಘದ ಬೆಳವಣಿಗೆಯಲ್ಲಿ ಸಹಕರಿಸುತ್ತಿರುವ ಎಲ್ಲಾ ನಿರ್ದೇಶಕರಿಗೆ ಮತ್ತು ಸದಸ್ಯರಿಗೆ ಹಾಗೂ ವೈದ್ಯಾಧಿಕಾರಿ ತಂಡಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.’
ಶುಭಪ್ರಕಾಶ್ ಎರಬೈಲು, ಅಧ್ಯಕ್ಷರು ತೆಗ್ಗು ಹಾ.ಉ.ಸ.ಸಂಘ

LEAVE A REPLY

Please enter your comment!
Please enter your name here