ಪುತ್ತೂರು: ಎನ್.ಎನ್.ಎಮ್ ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ತುಳು ಚಲನಚಿತ್ರ “ಪಿಲಿ” ಫೆ.10 ಕ್ಕೆ ಪುತ್ತೂರಿನಲ್ಲಿ ಬಿಡುಗಡೆ ಆಗಲಿದೆ ಎಂದು ಚಲನಚಿತ್ರದ ನಿರ್ದೆಶಕ ಮಯೂರ್ ಆರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಈಗಾಗಲೇ ದುಬೈಯಲ್ಲಿ ಪ್ರೀಮಿಯರ್ ಶೋ ನಡೆದಿದೆ. ಚಿತ್ರದಲ್ಲಿ ಯುವ ನಟ ಭರತ್ ಭಂಡಾರಿ ಕಥೆ ಬರೆದು ಪ್ರಥಮ ನಾಯಕ ನಟರಾಗಿ ಮಿಂಚಿದ್ದಾರೆ. ಸ್ವಾತಿ ಶೆಟ್ಟಿ ನಾಯಕಿ ನಟಿಯಾಗಿದ್ದಾರೆ. ಪ್ರಮುಖರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಚಿತ್ರದಲ್ಲಿ ತುಳುನಾಡಿನ ಪ್ರಸಿದ್ದ ಕಲಾವಿದರಾದ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಮಂದಿ ಕಲಾವಿದರು ಬೇರೆ ಬೇರೆ ರೀತಿಯ ಪಾತ್ರದಲ್ಲಿ ಕಾಣಲಿದ್ದಾರೆ ಎಂದ ಅವರು ಈ ಚಿತ್ರವನ್ನು ಹಾಸ್ಯದ ಜೊತೆ ಕಂಟೆಂಟ್ ಬೇಸ್ ನಲ್ಲಿ ಮಾಡಿದ್ದೇವೆ ಎಂದರು.
ನಾಯಕ ನಟ ಭರತ್ ಭಂಡಾರಿ ಮಾತನಾಡಿ ತುಳುನಾಡಿನ ಸಂಸ್ಕೃತಿ, ಆಚರಣೆ ನಂಬಿಕೆಯಲ್ಲಿ ಒಂದಾಗಿರುವ ಪಿಲಿ ನಲಿಕೆ ಕಥೆಗೆ ಮಾತ್ರ ಸೀಮಿತವಾಗದೆ “ಪಿಲಿ” ನಂಬಿಕೆಯ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ. ಇದರಲ್ಲಿ ನಾನು ನಾಯಕ ನಟನಾಗಿ ಪಾತ್ರ ವಹಿಸಿದ್ದೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.