ಮಂಗಳೂರು: ಮಂಗಳೂರಿನ ದೇರೆಬೈಲ್ ಕೊಂಚಾಡಿ, ಬೋರುಗುಡ್ಡೆಯ ಪವಿತ್ರ ನಿಲಯದಲ್ಲಿ ದೇಸಿಧಾಗೆ – ಬುಟಿಕ್ ಸರ್ವಿಸ್ ನ್ನು ಅಂಬಾಬೀಡು ಜಗನ್ನಾಥ ರೈ ಮತ್ತು ಅಂಬಾಬೀಡು ಪದ್ಮಾವತಿ ರೈಯವರು ಉದ್ಘಾಟಿಸಿ, ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಅಂಬಾಬೀಡು, ಮೆಗೀನ ಇಳಂತಾಜೆ, ದೇರ್ಲ ತರವಾಡು, ಕುತ್ಯಾಡಿ, ಬೈಲುಗುತ್ತಿನ ಗೌರವಾನ್ವಿತ ಹಿರಿಯರು ಆಗಮಿಸಿ ಶುಭಹಾರೈಸಿದರು.
ದೇಸಿಧಾಗೆ – ಬುಟಿಕ್ ಸರ್ವಿಸ್ ನಲ್ಲಿ , ಮಹಿಳೆಯರ ಹಾಗು ಮಕ್ಕಳ ಉನ್ನತ ಗುಣಮಟ್ಟದ ಅತ್ಯಾಧುನಿಕ ಫ್ಯಾಷನ್ ಬಟ್ಟೆ ಮತ್ತು ಪರಿಕರಗಳ ಮಾರಾಟ ಹಾಗು ಮಹಿಳೆಯರ ಮತ್ತು ಮಕ್ಕಳ ಅಭಿರುಚಿಗೆ ತಕ್ಕಂತೆ ಬಟ್ಟೆಗಳ ವಿನ್ಯಾಸ ಹಾಗು ಹೊಲಿಗೆಯನ್ನು ಮಾಡಿಕೊಡಲಾಗುವುದು.
“ದೇಸಿಧಾಗೆ ವಾಟ್ಸಾಪ್” ನಲ್ಲಿ ಸೇರುವ ಮೂಲಕ ನಿಮಗಿಷ್ಟವಾದ ಬಟ್ಟೆಗಳನ್ನು ಅದರಲ್ಲಿ ಆಯ್ಕೆ ಮಾಡುವ ಅವಕಾಶ ಮತ್ತು ನೀವು ಆಯ್ಕೆ ಮಾಡಿದ ಬಟ್ಟೆಗಳನ್ನು ಉತ್ತಮ ಬೆಲೆಯಲ್ಲಿ ನಿಮ್ಮ ಮನೆಬಾಗಿಲಿಗೆ ಆನ್ಲೈನ್ ಮೂಲಕ ತರಿಸಿಕೊಡುವ ವ್ಯವಸ್ಥೆ ಇದೆ.
ದೇಸಿಧಾಗೆ – ಬುಟಿಕ್ ಸರ್ವಿಸ್ ನ ಮೂಲ ಉದ್ದೇಶ, ನಮ್ಮ ದೇಶದ ಕೈಮಗ್ಗದ ಬಟ್ಟೆಗಳ ಸಂಗ್ರಹ ಮತ್ತು ಮಾರಾಟ, ಆ ಮೂಲಕ ಕೈಮಗ್ಗದ ನೇಕಾರರಿಗೆ ಪ್ರೋತ್ಸಾಹ ಹಾಗು ಉತ್ತೇಜನವನ್ನು ನೀಡುವುದು. ಸ್ವದೇಶಿ ಕೈಮಗ್ಗದ ಬಟ್ಟೆಗಳನ್ನೇ ಹೆಚ್ಚಾಗಿ ಖರೀದಿ ಮಾಡುವ ಮೂಲಕ ಸಹಕರಿಸಬೇಕು, ನಮ್ಮ ದೇಸಿಧಾಗೆ ಬುಟಿಕ್ಗೆ ತಾವೆಲ್ಲರೂ ಪ್ರೋತ್ಸಾಹವನ್ನು ನೀಡಬೇಕು ಎಂದು ದೇಸಿಧಾಗೆ ಬುಟಿಕ್ನ ಮಾಲಕರಾದ ವಿದ್ಯಾ ಸುಭಾಶ್ಚಚಂದ್ರ ಶೆಟ್ಟಿ ಯವರು ತಿಳಿಸಿದ್ದಾರೆ.
“ದೇಸಿಧಾಗೆ ವಾಟ್ಸಾಪ್” ಗೆ ಸೇರ ಬಯಸುವವರು ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಅಥವಾ ವಾಟ್ಸಾಫ್ ಸೇರಬಹುದು + 917899157554