ಉಪ ಚುನಾವಣೆ ಹಿನ್ನಲೆ ಆರ್ಯಾಪು ಗ್ರಾ.ಪಂನ ಗ್ರಾಮ ಸಭೆ ಮುಂದೂಡಿಕೆ

0

ಪುತ್ತೂರು: ಆರ್ಯಾಪು ಗ್ರಾನ ಪಂಚಾಯತ್‌ನ ಆರ್ಯಾಪು 4ನೇ ವಾರ್ಡ್‌ನ ಸದಸ್ಯ ಗಿರೀಶ್‌ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಫೆ.25 ರಂದು ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಫೆ.13 ರಂದು ನಡೆಯಬೇಕಾಗಿದ್ದ ಪಂಚಾಯತ್‌ನ ದ್ವಿತೀಯ ಸುತ್ತಿನ ಗ್ರಾಮ ಸಭೆಯನ್ನು ಮುಂದೂಡಲಾಗಿದೆ.


ಉಪ ಚುನಾವಣೆಗೆ ಫೆ.8 ರಂದು ಅಧಿಸೂಚನೆ ಪ್ರಕಟಗೊಂಡ ದಿನದಿಂದ ಫೆ.28 ರಂದು ಮತ ಎಣಿಕೆ ನಡೆಯುವ ತನಕ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರಲಿದೆ. ಹೀಗಾಗಿ ಗ್ರಾಮ ಸಭೆಯಲ್ಲಿ ಮುಂದೂಡಲಾಗಿದೆ. ಮುಂದಿನ ಸಭೆ ನಡೆಸುವ ದಿನಾಂಕವನ್ನು ತಿಳಿಸಲಾಗುವುದು ಎಂದು ಪಿಡಿಓ ನಾಗೇಶ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here