ಪುತ್ತೂರು:ಕೊಂಬೆಟ್ಟು ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದಲ್ಲಿ ವಿದ್ಯಾಮಾತಾ ಅಕಾಡೆಮಿ ವತಿಯಿಂದ ದ್ವಿತೀಯ ಪಿ. ಯು. ಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಫೆ.7ರಂದು ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಬಿರಾವು ಮತ್ತು ಪ್ರಾಂಶುಪಾಲರಾದ ಧರ್ಣಪ್ಪ ಗೌಡ ಕೆ ಉಪಸ್ಥಿತರಿದ್ದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕುವ, ದಾಖಲಾತಿಗಳನ್ನು ಸಲ್ಲಿಸುವ ಅಗತ್ಯ, ದೈಹಿಕ ಸದೃಢತೆ, ವೈದ್ಯಕೀಯ ಪರೀಕ್ಷೆ ಪೂರ್ವ ತಯಾರಿ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ವಿದ್ಯಾಮಾತಾ ಅಕಾಡೆಮಿಯ ತರಬೇತುದಾರ ವೇಣುಗೋಪಾಲ್ ಖಾಸಗಿ ಉದ್ಯೋಗ ಪಡೆಯುವ ಸಂದರ್ಭದಲ್ಲಿ ಎದುರಿಸಬೇಕಾದ ನೇರ ಸಂದರ್ಶನ ಅನುಸರಿಸಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಸ. ಪ.ಪೂ ಕಾಲೇಜು ಉಪನ್ಯಾಸಕ ಈಶ್ವರ ಭಟ್, ಗೋಪಾಲ ಕೆ, ಮನಮೋಹನ್, ಸ್ಮಿತಾ ಬೇಕಲ್, ಕೀರ್ತನ್, ಪ್ರಕಾಶ್, ಲತಾ ಕೆ ಮತ್ತು ವಿದ್ಯಾಮಾತಾ ಅಕಾಡೆಮಿಯ ಚಂದ್ರಕಾಂತ್, ಹರ್ಷಿತಾ ಆಚಾರ್ಯ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.